ಕನ್ನಡ ವಾರ್ತೆಗಳು

ಕೃಷ್ಣಾಪುರ ಖಾಝಿಯಾಗಿ ಇ. ಕೆ. ಇಬ್ರಾಹಿಂ ಮುಸ್ಲಿಯಾರ್ ಅಧಿಕಾರ ಸ್ವೀಕಾರ

Pinterest LinkedIn Tumblr

krishnpura_new_Kahaji_1

ಮಂಗಳೂರು: ಡಿ. 29: ಕೃಷ್ಣಾಪುರ ಏಳನೇ ವಿಭಾಗದ ಬದ್ರಿಯಾ ಜುಮ್‌ಅ ಮಸ್ಜಿದ್ ಮುಸ್ಲಿಂ ಜಮಾ‌ಅತ್ (ರಿ.) ನ ಖಾಝಿಯಾಗಿ ರವಿವಾರ ರಾತ್ರಿ ಕೃಷ್ಣಾಪುರದ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಅಲ್‌ಹಾಜ್ ಇ. ಕೆ. ಇಬ್ರಾಹಿಂ ಮುಸ್ಲಿಯಾರ್ ಅಧಿಕಾರ ಸ್ವೀಕರಿಸಿದರು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯ ಹಾಗೂ ಲತೀಫಿಯ ಇಸ್ಲಾಮಿಕ್ ಸಂಸ್ಥೆಯ ಅಧ್ಯಕ್ಷರಾದ ಉಸ್ತಾದುಲ್ ಅಸಾತೀದ್ ಎಂ. ಆಲಿ ಕುಂಞಿ ಮುಸ್ಲಿಯಾರ್ ಶಿರಿಯಾ ಖಾಝಿ ಸ್ಥಾನರೋಹಣ ನಿರ್ವಹಿಸಿದರು. ಉಡುಪಿ, ಚಿಕ್ಕಮಗಳೂರು ಮತ್ತು ಹಾಸನದ ಗೌರವಾನ್ವಿತ ಖಾಝಿ ಮತ್ತು ಕರ್ನಾಟಕ ರಾಜ್ಯದ ಜಂಇಯ್ಯತ್ತುಲ್ ಉಲಾಮ ಇದರ ಅಧ್ಯಕ್ಷರಾದ ಅಲ್ ಹಾಜ್ ಪಿ. ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಸಮಾರಂಭ ಉದ್ಘಾಟಿಸಿ ದಿಕ್ಸೂಚಿ ಭಾಷಣವನ್ನು ಮಾಡಿದರು.

krishnpura_new_Kahaji_2 krishnpura_new_Kahaji_3 krishnpura_new_kahaji_4 krishnpura_new_Kahaji_5 krishnpura_new_Kahaji_6 krishnpura_new_Kahaji_8

ಸಮಾರಂಭದ ಅಧ್ಯಕ್ಷತೆಯನ್ನು ಬದ್ರಿಯಾ ಜುಮ್‌ಅ ಮಸ್ಜಿದ್ ಅಧ್ಯಕ್ಷರಾದ ಅಲ್‌ಹಾಜ್ ಬಿ. ಎಂ. ಮಮ್ತಾಝ್ ಆಲಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಾಸಕ ಬಿ. ಎ. ಮೊದಿನ್ ಬಾವ, ದ. ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಅಲ್‌ಹಾಜ್ ಎಸ್. ಎಂ. ರಶೀದ್, ರಾಜ್ಯ ವಕ್ಫ್ ಸಮಿತಿ ಗೌರವಾನ್ವಿತ ಸದಸ್ಯರಾದ ಅಲ್‌ಹಾಜ್ ಯೆನೆಪೋಯ ಮುಹಮ್ಮದ್ ಕುಂಞ, ದ.ಕ. ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಅಲ್‌ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್, ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷರಾದ ಅಲ್‌ಹಾಜ್ ಯು. ಎಸ್. ಹಂಝ, ಜೆಡಿ‌ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಹೈದರ್ ಪರ್ತಿಪಾಡಿ, ಉದ್ಯಮಿ ನಝೀರ್ ಕತಾರ್ ಭಾಗವಹಿಸಿದ್ದರು. ವಿಶೇಷ ಅಹ್ವಾನಿತರಾಗಿ ಬೈಕಂಪಾಡಿ ಮೊಹಿಯುದ್ದೀನ್ ಜುಮ್‌ಅ ಮಸ್ಜಿದ್ ಅಧ್ಯಕ್ಷ ಜನಾಬ್ ಬಿ. ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಚೊಕ್ಕಬೆಟ್ಟು ತಣ್ಣೀರುಬಾವಿ ಮೊಹಿಯುದ್ದೀನ್ ಜುಮ್‌ಅ ಮಸ್ಜಿದ್, ಅಧ್ಯಕ್ಷರು, ಅಲ್‌ಹಾಜ್ ಎ. ಎಸ್. ಸಿದ್ದೀಕ್, ಕಾಟಿಪಳ್ಳ ೨ನೇ ಬ್ಲಾಕ್ ಮೊಹಿಯುದ್ದೀನ್ ಜುಮ್‌ಅ ಮಸ್ಜಿದ್‌ನ ಅಧ್ಯಕ್ಷ ಅಲ್ ಹಾಜ್ ಪಿ. ಎಂ. ಸಲೀಂ ರಫಿ, ಮುಕ್ಕ ಮೊಹಿಯುದ್ದೀನ್ ಜುಮ್‌ಅ ಮಸ್ಜಿದ್, ಅಧ್ಯಕ್ಷ, ಜನಾಬ್ ಎಂ. ಅಬ್ದುಲ್ ರಜಾಕ್, ಕುಳಾಯಿ ಮೊಹಿಯುದ್ದೀನ್ ಜುಮ್‌ಅ ಮಸ್ಜಿದ್, ಅಧ್ಯಕ್ಷ ಜನಾಬ್ ಅಬೂಬಕ್ಕರ್ ಮುಬಾರಕ್ ಕಾನ, ಬದ್ರಿಯಾ ಜುಮ್‌ಅ ಮಸ್ಜಿದ್‌ನ ಅಧ್ಯಕ್ಷ ಜನಾಬ್ ಬಿ. ಎಸ್. ಉಮರ್ ಅನೀಸ್, ಸುರತ್ಕಲ್ ಬದ್ರಿಯಾ ನಗರ, ಮಸ್ಜಿದ್‌ನ್ನೂರ್ ಜುಮ್‌ಅ ಮಸ್ಜಿದ್‌ನ ಅಧ್ಯಕ್ಷರಾದ ಜನಾಬ್ ಅಬ್ದುಲ್ ಹಮೀದ್ ಕಾಟಿಪಳ್ಳ, ೯ನೇ ಬ್ಲಾಕ್, ಅನ್ಸಾರಿಯ ಜುಮ್‌ಅ ಮಸ್ಜಿದ್‌ನ ಅಧ್ಯಕ್ಷರಾದ ಜನಾಬ್ ಕೆ. ಸಿ. ಸೈದಾಲಿ, ಸೂರಿಂಜೆ ಮೊಹಿಯುದ್ದೀನ್ ಜುಮ್‌ಅ ಮಸ್ಜಿದ್‌ನ ಅಧ್ಯಕ್ಷರಾದ ಅಲ್‌ಹಾಜ್ ಉಸ್ಮಾನ್ ಅಬ್ದುಲ್ಲಾ ಮಂಗಳಪೇಟೆ ಮೊಹಿಯುದ್ದೀನ್ ಜುಮ್‌ಅ ಮಸ್ಜಿದ್‌ನ ಅಧ್ಯಕ್ಷರಾದ ಜನಾಬ್ ಅಬ್ದುಲ್ ಹಮೀದ್, ಪಂಪವೆಲ್ ಇಸ್ಮಾಮಿಕ್ ಕಲ್ಚರಲ್ ಸೆಂಟರ್‌ನ ಉಪಾಧ್ಯಕ್ಷರಾದ ಎಚ್. ಎಚ್. ಅಬ್ದುಲ್ ಅಝೀಝ್ ಭಾಗವಹಿಸಿದ್ದರು.

krishnpura_new_Kahaji_9 krishnpura_new_Kahaji_10 krishnpura_new_Kahaji_11 krishnpura_new_Kahaji_12 krishnpura_new_Kahaji_13 krishnpura_new_Kahaji_14 krishnpura_new_Kahaji_18 krishnpura_new_Kahaji_20 krishnpura_new_Kahaji_21 krishnpura_new_Kahaji_22 krishnpura_new_Kahaji_24

ಕೃಷ್ಣಾಪುರ ೭ನೇ ವಿಭಾಗದ ಬದ್ರಿಯಾ ಜುಮ್‌ಅ ಮಸ್ಜಿದ್ ಮಾಜಿ ಅಧ್ಯಕ್ಷರಾದ ಹಾಜಿ ಬಿ. ಎಂ. ಹುಸೈನ್, ಹಾಜಿ ಕೆ. ಮುಹಮ್ಮದ್, ಹಾಜಿ ಬಿ. ಎಚ್. ಮುಹಮ್ಮದ್ ಹಸನ್, ಜನಾಬ್ ಅಬೂಬಕ್ಕರ್ (ಎನ್. ಎಂ. ಪಿ. ಟಿ.) ಹಾಗೂ ಜಮಾ‌ಅತಿನ ಉಪಾಧ್ಯಕ್ಷ ಅಬ್ದುಲ್ ಹಕೀಂ, ಜೊತೆ ಕಾರ್ಯದರ್ಶಿ ಎಸ್. ಇಸ್ಮಾಯಿಲ್, ಕೋಶಾಧಿಕಾರಿ ಮುಹಮ್ಮದ್ ಶೆಡ್ಯ, ಗೌರವ ಲೆಕ್ಕ ಪರಿಶೋಧಕ ಬಿ. ಎ. ಇಕ್ಬಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

krishnpura_new_Kahaji_23a krishnpura_new_Kahaji_7a krishnpura_new_Kahaji_19a

ಮೌಲನಾ ಆತೂರು ಇಬ್ರಾಹಿಂ ಸಖಾಫಿ ಶುಭ ಹಾರೈಸಿದರು. ಸ್ಥಳೀಯ ಸಂಘ ಸಂಸ್ಥೆಗಳ ಮುಖ್ಯಸ್ಥರು ಅಭಿನಂದಿಸಿದರು. ಪುತ್ತೂರು ಮರ್ಕಝಲ್ ಹುದಾ ವಿಮೆನ್ಸ್ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಎಂ. ಎಸ್. ಎಂ. ಅಬ್ದುಲ್ ರಶೀದ್ ಝೈನಿ ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಹಾಜಿ ಟಿ. ಎಂ. ಶರೀಫ್ ಸ್ವಾಗತಿಸಿದರು. ಪಂಪ್‌ವೆಲ್‌ನ ಇಬ್ರಾಹಿಂ ಮುಸ್ಲಿಯಾರ್ ಕಿರಾ‌ಅತ್ ಪಠಿಸಿದರು. ಜೊತೆ ಕಾರ್ಯದರ್ಶಿ ಎಸ್. ಇಸ್ಮಾಯಿಲ್ ವಂದಿಸಿದರು.

Write A Comment