ಕನ್ನಡ ವಾರ್ತೆಗಳು

ಗ್ರಾಮೀಣ ಪರಿಕರಗಳನ್ನು ಯುವ ಜನಾಂಗಕ್ಕೆ ಪರಿಚಯಿಸಿದ ಗ್ರಾಮೀಣ ಕ್ರೀಡಾ ಹಬ್ಬ; ಕೋಟದ ಅಚ್ಲಾಡಿಯಲ್ಲಿ ನಡೆದ ಹಬ್ಬ

Pinterest LinkedIn Tumblr

ಕುಂದಾಪುರ: ಅಚ್ಲಾಡಿ ಸನ್‌ಶೈನ್ ಗೆಳೆಯರ ಬಳಗ (ರಿ.) ಕ್ರೀಡಾ ಸಂಘ ವತಿಯಿಂದ 7 ನೇ ವಾರ್ಷಿಕೋತ್ಸವದ ಪ್ರಯುಕ್ತ  ಅಚ್ಲಾಡಿ ಸನ್‌ಶೈನ್ ಕ್ರೀಡಾಂಗಣದಲ್ಲಿ , ಗ್ರಾಮೀಣ ಸಂಸ್ಕೃತಿಯ ಕ್ರೀಡಾ ತೋರಣ ಎನ್ನುವ ಆಶಯದೊಂದಿಗೆ “ಗ್ರಾಮೀಣ ಕ್ರೀಡಾ ಹಬ್ಬ” ಕಾರ್ಯಕ್ರಮ ಜರುಗಿತು.

Kota_Graameena_Habba (3) Kota_Graameena_Habba (4) Kota_Graameena_Habba (1) Kota_Graameena_Habba (2) Kota_Graameena_Habba

ಕಾರ್ಯಕ್ರಮದಲ್ಲಿ ಗ್ರಾಮೀಣ ಪರಿಕರಗಳನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವ ಹಾಗೂ ಗ್ರಾಮೀಣ ಸಂಸ್ಕೃತಿ ಸಾಂಪ್ರದಾಯವನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಮೂರು ಸಾವಿರಕ್ಕೂ ಅಧಿಕ ಗ್ರಾಮೀಣ ಪರಿಕರಗಳನ್ನು ಪ್ರದರ್ಶನಗೊಳಿಸಲಾಯಿತು ಹಾಗೂ ರಂಗೋಲಿ ಸ್ಪರ್ಧೆ, ಚನ್ನೆಮಣೆ ಆಟ, ತೆಂಗಿನ ಗರಿ ನೇಯುವ ಸ್ಪರ್ಧೆ, ಕಾಯಿ ಸಿಪ್ಪೆ ತೆಗೆಯುವ ಸ್ಪರ್ಧೆ, ಟೊಂಕಾಲು, ಲಿಂಬೆ ಹಣ್ಣು ಚಮಚ, ರಗೋಲಿ, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಿ ಗ್ರಾಮೀಣ ಪ್ರದೇಶದ ಜನರಿಗೆ ಗ್ರಾಮೀಣ ಕ್ರೀಡೆಯ ಸವಿಯುಣಿಸಲಾಯಿತು. ನೂರಾರು ಮಂದಿ ಸಾರ್ವಜನಿಕರು ಕ್ರೀಡೆಯಲ್ಲಿ ಆಸಕ್ತಿಯಿಂದ ಭಾಗವಹಿಸಿದರು.ಒಟ್ಟಾರೆ ಕಾರ್ಯಕ್ರಮದ ಮೂಲಕ ಮರೆಯಾಗುತ್ತಿರುವ ಗ್ರಾಮೀಣ ಸೊಗಡಿನ ಕ್ರೀಡೆ ಮತ್ತು ಸಂಸ್ಕೃತಿಗಳನ್ನು ಪರಿಚಯಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ : ಉಡುಪಿ ತಾ.ಪಂ.ಸದಸ್ಯೆ ಪರಿಮಳ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಸನ್‌ಶೈನ್ ಗೆಳೆಯರ ಬಳಗದ ಗೌರವಾಧ್ಯಕ್ಷ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಡ್ಡರ್ಸೆ ಗ್ರಾ.ಪಂ.ಸದಸ್ಯ ದೇವ ಭಂಡಾರಿ, ಗೋವಿಂದ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೋಟ ವಲಯ ಮೇಲ್ವಿಚಾರಕ ಮೋಹನ್, ಮಧುವನ ಒಕ್ಕೂಟದ ಅಧ್ಯಕ್ಷೆ ಕಲಾವತಿ, ಶಿರಿಯಾರ ಒಕ್ಕೂಟದ ಪ್ರೇಮ ಸೇವಾಪ್ರತಿನಿಧಿ ಲಕ್ಷ್ಮಿ, ರವೀಂದ ಶಿರಿಯಾರ ಉಪಸ್ಥಿತರಿದ್ದರು.

ಸುರ್ಗೋಳಿ ಸ.ಹಿ. ಪ್ರಾ. ಶಾಲೆಯ ಶಿಕ್ಷಕ ಶ್ರೀನಿವಾಸ ಗ್ರಾಮೀಣ ಪರಿಕರಗಳ ಪ್ರದರ್ಶನಗೊಳಿಸಿದರು. ಸಂಸ್ಥೆಯ ಖಜಾಂಜಿ, ಪತ್ರಕರ್ತ ರಾಜೇಶ್ ಗಾಣಿಗ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕಿರಣ್ ಕೆ.ಪಿ. ವಂದಿಸಿದರು.

Write A Comment