ಕನ್ನಡ ವಾರ್ತೆಗಳು

ಬಿಲ್ಲವರ ಅಸೋಷಿಯೇಶನ್ ವತಿಯಿಂದ ಕೋಟಿ-ಚೆನ್ನಯ ಕ್ರೀಡಾ ಕೂಟ

Pinterest LinkedIn Tumblr

ವರದಿ : ಈಶ್ವರ ಎಂ. ಐಲ್ / ಚಿತ್ರ,: ದಿನೇಶ್ ಕುಲಾಲ್

kotichenai_krida_kuta_1

ಮುಂಬಯಿ : ಬಿಲ್ಲವರ ಅಸೋಷಿಯೇಶನ್ ಇದರ ಯುವ ಅಭ್ಯುದಯ ಸಮಿತಿಯ ವತಿಯಿಂದ ಕೋಟಿ-ಚೆನ್ನಯ ಕ್ರೀಡಾ ಕೂಟವು ಡಿ. 25ರಂದು ಕಾಂದಿವಲಿ ಪೂರ್ವ ಸಮಾತಾ ನಗರದ ಮೈದಾನದಲ್ಲಿ ನಡೆಯಿತು.

ಈ ಸಮಾರಂಭಕ್ಕೆ ಆಗಮಿಸಿದ್ದ ಓಲಿಂಪಿಯನ್ ಸಹನಾ ಕುಮಾರಿ ಅವರನ್ನು ಅಸೋಷಿಯೇಶನ್ ನ ಗೌರವ ಅಧ್ಯಕ್ಷ ಜಯ ಸಿ. ಸುವರ್ಣ ಗೌರವಿಸಿದರು. ನಂತರ ಮಾತನಾಡಿದ ಅವರು ತನ್ನ ಕ್ರೀಡಾ ಬದುಕಿಗೆ ಸಹಕರಿಸಿದವರನ್ನು ನೆನಪಿಸಿಕೊಂಡರು.

kotichenai_krida_kuta_2 kotichenai_krida_kuta_3

ಜಯ ಸಿ ಸುವರ್ಣರು ಮಾತನಾಡುತ್ತ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಮುದಾಯದ ಪ್ರತಿಭೆ ಬೆಳಕಿಗೆ ಬಂದಿರುವುದು ಸಮಾಜಕ್ಕೆ ಗೌರವ ತಂದಿದೆ ಎಂದರು.  ಸಂಸದ ಬಿ. ಕೆ. ಹರಿಪ್ರಸಾದ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಂಜೆ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಿಲ್ಲವರ ಅಸೋಷಿಯೇಶನ್ ಇದರ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಅವರು ಮಾತನಾಡುತ್ತಾ ಕೋಟಿ ಚೆನ್ನಯರ ಆದರ್ಶವನ್ನು ಇಂದಿನ ಯುವ ಪೀಳಿಗೆಯು ಪಾಲಿಸಬೇಕು, ಎಂದರು.

kotichenai_krida_kuta_4 kotichenai_krida_kuta_5 kotichenai_krida_kuta_6

ವೇದಿಕೆಯಲ್ಲಿ ಬಿಲ್ಲವ ಸಮಾಜದ ಅನೇಕ ಗಣ್ಯರು, ಬಿಲ್ಲವರ ಅಸೋಷಿಯೇಶನ್  ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಕೋಟ್ಯಾನ್ ಸ್ವಾಗತಿಸಿದರು. ಸದಾಶಿವ ಕರ್ಕೇರ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು.

Write A Comment