ಕನ್ನಡ ವಾರ್ತೆಗಳು

ಎಂಆರ್‌ಪಿಎಲ್‌ ವಿರುದ್ಧ ಜೋಕಟ್ಟೆ ನಿವಾಸಿಗಳು ನಡೆಸುತ್ತಿರುವ ಹೋರಾಟ ಹತ್ತಿಕ್ಕುವ ಯತ್ನ :ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಆರೋಪ

Pinterest LinkedIn Tumblr

dyfi_press_meet_2

ಮಂಗಳೂರು, ಡಿ.28: ಎಂಆರ್‌ಪಿಎಲ್‌ನ ಮೂರನೆ ಹಂತದ ಘಟಕ ಕೋಕ್ ಸಲರ್ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ಜೋಕಟ್ಟೆ ನಿವಾಸಿಗಳು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಕಂಪೆನಿಗಳು ವಿನಾ ಕಾರಣ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸುವ ಕೆಲಸ ಮಾಡುತ್ತಿವೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಆರೋಪಿಸಿದೆ.

ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಂಘಟನೆ ಈ ಆರೋಪವನ್ನು ಮಾಡಿದೆ. ಸ್ಥಳೀಯ ಜನರ ಹೋರಾಟಕ್ಕೆ ಜಿಲ್ಲಾಡಳಿತವಾಗಲಿ, ಸ್ಥಳೀಯ ಜನಪ್ರತಿನಿಧಿ ಗಳಾಗಲಿ, ಸರಕಾರವಾಗಲೀ ಸಕಾರಾತ್ಮಕ ಪ್ರತಿಕ್ರಿಯೆ ತೋರಿಸುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ವಿರುದ್ಧ ಉಗ್ರ ರೀತಿಯ ಹೋರಾಟವನ್ನು ನಾಗರಿಕರು ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ ಸಮಿತಿಯ ಮುಖಂಡ ಬಿ.ಎಸ್.ಹುಸೈನ್ ತಿಳಿಸಿದ್ದಾರೆ.

dyfi_press_meet_1

ಕಂಪೆನಿ, ಸರಕಾರ ಪೊಲೀಸರನ್ನು ಬಳಸಿಕೊಂಡು ಹೋರಾಟದ ಮುಂಚೂಣಿಯಲ್ಲಿರುವ ನಾಯಕರನ್ನು ಕ್ರಿಮಿನಲ್‌ಗಳನ್ನಾಗಿ ಚಿತ್ರಿಸಲು ಯತ್ನಿಸುತ್ತಿದೆ. ಇದರ ಭಾಗವಾಗಿ ಪಣಂಬೂರು ಮತ್ತು ಸುರತ್ಕಲ್ ಠಾಣೆಗಳಲ್ಲಿ ಎಸ್‌ಇಝೆಡ್ ಅಕಾರಿಗಳು 17 ಮುಖಂಡರ ಮೇಲೆ ದೂರುಗಳನ್ನು ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆ ಇಲ್ಲದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೋಕ್ ಸಲರ್‌ಗಳನ್ನು ಎಂಆರ್‌ಪಿಎಲ್ ಘಟಕ ದಿಂದ ಸಾಗಿಸಲು ಹಲವು ನಿಯಮಗಳಿದ್ದರೂ, ಅವುಗಳನ್ನೆಲ್ಲಾ ಗಾಳಿಗೆ ತೂರಿ, ರಸ್ತೆಗಳ ಮೇಲೆ ಕೋಕ್ ಉಂಡೆಗಳನ್ನು ಚೆಲ್ಲುತ್ತಾ ಸ್ಥಳೀಯ ಆಡಳಿತದ ರಸ್ತೆಗಳಲ್ಲಿ ಸಾಗಾಟ ನಡೆಸಲಾಗುತ್ತಿದೆ. ಅವರದ್ದೇ ಪ್ರತ್ಯೇಕ ರಸ್ತೆಗಳ ಮೂಲಕ ಹೆದ್ದಾರಿ ಗಳನ್ನು ತಲುಪಬೇಕು ಎಂಬ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ಈ ರೀತಿ ಕೋಕ್ ರಸ್ತೆಗಳಿಗೆ ಚೆಲ್ಲುತ್ತಿರುವುದರಿಂದ ಪರಿಸರ ಮಾಲಿನ್ಯದ ಜೊತೆಗೆ, ವಾಹನ ಚಾಲಕರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಪ್ರಶ್ನಿಸಿದರೆ, ಎಂಆರ್‌ಪಿಎಲ್ ನಿಯೋಜಿಸಿರುವ ಗೂಂಡಾಗಳು, ಸ್ಥಳೀಯ ಪೊಲೀಸರು ಪ್ರಶ್ನಿಸುವ ಸಾರ್ವಜನಿಕರನ್ನೇ ಬಹಿರಂಗವಾಗಿ ಬೆದರಿಸುತ್ತಿದ್ದಾರೆ.

dyfi_press_meet_3

 

ಇದಲ್ಲದೆ ಎಸ್‌ಇಝೆಡ್ ವ್ಯಾಪ್ತಿಯಲ್ಲಿ ಹಲವು ಪೆಟ್ರೋ ಕೆಮಿಕಲ್ ಉದ್ಯಮಗಳು ತಲೆ ನಿರಂತರವಾಗಿ ಎತ್ತುತ್ತಿವೆ. ಇವುಗಳ ಉತ್ಪನ್ನ, ಮಾಲಿನ್ಯಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಂಪೆನಿಗಳೆ ತಮ್ಮದು ಅಪಾಯಕಾರಿ ಕೈಗಾರಿಕೆಗಳು ಎಂದು ವಿಪತ್ತು ನಿರ್ವಹಣಾ ಸಮಿತಿಯಲ್ಲಿ ಹೇಳಿಕೊಂಡಿವೆ ಮತ್ತು ಇಂತಹ ಕಂಪೆನಿ ಬೆಂಝಿನ್‌ನಂತಹ ಕ್ಯಾನ್ಸರ್‌ಕಾರಕ ಕಿರಣಗಳು ಹೊರಸೂಸುತ್ತಿವೆ ಎಂಬ ಆತಂಕವನ್ನು ಅಕಾರಿಗಳೇ ವ್ಯಕ್ತಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಿಂದಾಗಿ ಸ್ಥಳೀಯ ಗ್ರಾಮಗಳು ಮಾತ್ರವಲ್ಲದೆ ಮಂಗಳೂರಿನ ಜನತೆಯ ಬದುಕೇ ಅಪಾಯದ ಅಂಚಿನಲ್ಲಿದೆ ಎಂದು ಹುಸೈನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್, ಬಿ.ಕೆ. ಇಮ್ತಿಯಾಝ್, ಪಿ.ವಿ. ರಾವ್, ಮೊಯ್ದಿನ್ ಶರ್ೀ, ಮೋಹನ್ ಕಳವಾರು, ಸಂತೋಷ್ ಬಜಾಲ್, ಅಬೂಬಕರ್ ಬಾವ ಉಪಸ್ಥಿತರಿದ್ದರು.

Write A Comment