ಕನ್ನಡ ವಾರ್ತೆಗಳು

9 ದಿನಗಳ ಪಣಂಬೂರು ಬೀಚ್ ಉತ್ಸವಕ್ಕೆ ಅದ್ದೂರಿ ಚಾಲನೆ

Pinterest LinkedIn Tumblr

beach_fest_photo_1

ಮಂಗಳೂರು,ಡಿ.25: ಕರಾವಳಿ ಉತ್ಸವದ ಭಾಗವಾಗಿ ಪಣಂಬೂರು ಬೀಚ್‌ನಲ್ಲಿ 9 ದಿನಗಳ ಕಾಲ ನಡೆಯಲಿರುವ ಬೀಚ್ ಉತ್ಸವವನ್ನು ಬುಧವಾರ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿ, ಬೀಚ್ ಉತ್ಸವದಿಂದ ಕರಾವಳಿ ಉತ್ಸವಕ್ಕೆ ಮೆರುಗು ಸಿಗಲಿದೆ. ಇಲ್ಲಿನ ಸಂಸ್ಕೃತಿಯ ಜತೆಗೆ ಆಹಾರ ಪದ್ಧ್ದತಿಯನ್ನು ಹೊರ ಜಿಲ್ಲೆಗಳ ಪ್ರವಾಸಿಗರಿಗೆ ಪರಿಚಯಿಸುವ ಪ್ರಯತ್ನ ನಡೆಯಬೇಕು ಎಂದು ಹೇಳಿದರು.

ಬೀಚ್ ಉತ್ಸವದ ಕಾರ್ಯಕ್ರಮಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿ ಅಚರಿಸಲು ಕಂಪೆನಿಗಳು ನೆರವಾಗಬೇಕು. ಬೀಚ್ ರಸ್ತೆ ಅವ್ಯವಸ್ಥೆ ಬಗೆಹರಿಸಲು ಎನ್‌ಎಂಟಿಪಿಟಿಗೆ ಸೂಚಿಸಬೇಕು ಎಂದು ಅವರು ಈ ಸಂದರ್ಭ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

beach_fest_photo_3beach_fest_photo_2a

ಬೇರೆ ಬೀಚ್‌ಗಳಲ್ಲಿ ಉತ್ಸವ ನಡೆಸುವ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ತಿಳಿಸಿದ ಅವರು, ಕರಾವಳಿ ನಿವಾಸಿಗಳ ಅನುಕೂಲತೆಗಾಗಿ ಸಿಆರ್‌ಝಡ್‌ಗೆ ತಿದ್ದು ಪಡಿ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದರು.

ಐದು ಬೀಚ್‌ಗಳ ಅಭಿವದ್ಧಿ: ಸುರತ್ಕಲ್ ಸಹಿತ ಐದು ಬೀಚ್‌ಗಳ ಅಭಿವದ್ಧಿಗೆ 13 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿದೆ. ಅಲ್ಲದೆ ಸೈಕ್ಲೋನ್ ತಡೆ ಯೋಜನೆ ಅನ್ವಯ ಕರಾವಳಿಯ ಅಭಿವದ್ಧಿಗೆ 35 ಕೋಟಿ ರೂ.ಪ್ರಸ್ತಾಪವಿದೆ ಇದು ಬೀಚ್‌ಗಳ ಅಭಿವದ್ದಿಗೂ ಪೂರಕವಾಗಲಿದೆ ಮೂಲ್ಕಿಯಲ್ಲಿ ಸರ್ಫಿಂಗ್ ಕೇಂದ್ರ ಕೇಂದ್ರ ಅಭಿವದ್ಧಿಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎ.ಬಿ. ಇಬ್ರಾಹಿಂ ತಿಳಿಸಿದರು.

beach_fest_photo_5 beach_fest_photo_4

ಈ ಸಂದರ್ಭ ಆಹಾರೋತ್ಸವಕ್ಕೆ ಚಾಲನೆ ನೀಡಲಾಯಿತು. ಶಾಸಕ ಮೊದಿನ್ ಬಾವಾ, ಮೇಯರ್ ಮಹಾಬಲ ಮಾರ್ಲ, ಉಪಮೇಯರ್ ಕವಿತಾ, ದ.ಕ. ಎಸ್ಪಿ ಡಾ. ಶರರಣಪ್ಪ, ತಹಶೀಲ್ದಾರ್ ಮೋಹನ್ ರಾವ್, ಬೀಚ್ ಉತ್ಸವ ಸಮಿತಿ ಅಧ್ಯಕ್ಷರಾಗಿರುವ ಸಹಾಯಕ ಆಯುಕ್ತ ಡಾ. ಅಶೋಕ್, ಸುರೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಪಣಂಬೂರು ಬೀಚ್ ಅಭಿವದ್ಧಿ ಸಂಸ್ಥೆಯ ಯತೀಶ್ ಬೈಕಂಪಾಡಿ ಸ್ವಾಗತಿಸಿದರು.

Write A Comment