ಕನ್ನಡ ವಾರ್ತೆಗಳು

ಕ್ರಿಸ್‌ಮಸ್‌ ಹಬ್ಬಕ್ಕಾಗಿ : ಕಾಚಿಗೂಡಾ-ಬೆಂಗಳೂರು ವಿಶೇಷ ರೈಲು

Pinterest LinkedIn Tumblr

semi_hi_speed_train_AFP_0

ಬೆಂಗಳೂರು, ಡಿ. 23 : ಕ್ರಿಸ್‌ಮಸ್ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ತಪ್ಪಿಸಲು ರೈಲ್ವೆ ಇಲಾಖೆ ಬೆಂಗಳೂರು-ಕಾಚಿಗೂಡಾ ನಡುವೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನಿಂದ-ಕಾಚಿಗೂಡಾಕ್ಕೆ ಮತ್ತು ಕಾಚಿಗೂಡಾದಿಂದ ಬೆಂಗಳೂರಿಗೆ ಈ ರೈಲು ಸಂಚರಿಸಲಿದೆ.

ಬೆಂಗಳೂರು-ಕಾಚಿಗೂಡಾ ವಿಶೇಷ ಪ್ರೀಮಿಯಂ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ರೈಲು ನಿಲ್ದಾಣದಿಂದ ರಾತ್ರಿ 9.30ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 7.30ಕ್ಕೆ ಕಾಚಿಗೂಡಾಕ್ಕೆ ತಲುಪಲಿದೆ.
ಡಿಸೆಂಬರ್ 23, 25, 27, 29, 31, ಜನವರಿ 2 ಮತ್ತು 4ರಂದು ಈ ರೈಲುಗಳು ಸಂಚರಿಸಲಿವೆ. ಬೆಂಗಳೂರು ಕಾಂಟೋನ್ಮೆಂಟ್ ಮತ್ತು ಯಲಹಂಕ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೊಳ್ಳಲಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಚಿಗೂಡಾದಿಂದ ಬೆಂಗಳೂರಿಗೆ ಮರಳಲು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದ್ದು ಕಾಚಿಗೂಡಾದಿಂದ ಸಂಜೆ 5.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 4 ಗಂಟೆಗೆ ಬೆಂಗಳೂರಿಗೆ ತಲುಪಲಿದೆ. ಡಿ. 24, 26, 28, 30, ಜನವರಿ 1, 3 ಮತ್ತು 5ರಂದು ಈ ರೈಲು ಸಂಚರಿಸಲಿದೆ.

Write A Comment