ಕನ್ನಡ ವಾರ್ತೆಗಳು

ಎಳ್ಳುಅಮಾವ್ಯಾಸೆ ವಿಶೇಷ ಸಮುದ್ರ ಸ್ನಾನ.

Pinterest LinkedIn Tumblr

amavse_see_bath_1

ಮಂಗಳೂರು,ಡಿ.22 : ಎಳ್ಳುಅಮಾವ್ಯಾಸೆ ಪ್ರಯುಕ್ತ ಸಮುದ್ರ ಸ್ನಾನ ಆಚರಣೆಯು ಕರ್ನಾಟಕದ ಕರಾವಳಿ ಪ್ರದೇಶದ ವಿವಿಧ ಭಾಗಗಳಲ್ಲಿ ಸೋಮವಾರ ಬೆಳಗ್ಗಿನಿಂದಾಲೇ ಪ್ರಾರಂಭವಾಗಿದ್ದು ಜನರು ಸಮುದ್ರ ಸ್ನಾನಕ್ಕಾಗಿ ತೀರಗಳತ್ತ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪುರುಷರು, ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಕರಾವಳಿಗರು ಈ ವಿಶೇಷ ದಿನದ ಸಮುದ್ರ ಸ್ನಾನವನ್ನು ಮಾಡುವ ಮೂಲಕ ತಲೆತಲಾಂತರಗಳಿಂದ ಸಾಗಿ ಬಂದಿರುವ ಆಚರಣೆಯನ್ನು ಪಾಲಿಸಿದರು.

amavse_see_bath_2 amavse_see_bath_3

ಇದೇ ಸಂದರ್ಭದಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡುವ ಕಾರ್ಯಗಳೂ ಸಹ ಸಮುದ್ರ ಕಿನಾರೆಯಲ್ಲಿ ವೈದಿಕರ ನೇತೃತ್ವದಲ್ಲಿ ನಡೆಯುತ್ತಿತ್ತು. ಸಮುದ್ರ ಸ್ನಾನಕ್ಕಾಗಿ ಜನರು ಸಮುದ್ರ ತೀರಗಳತ್ತ ಧಾವಿಸುವುದರಿಂದ ಅಗತ್ಯ ಬೆಳಕಿನ ವ್ಯವಸ್ಥೆಯನ್ನು ಜಿಲ್ಲಾಡಳಿತವು ಸ್ಥಳೀಯರ ಸಹಕಾರದಿಂದ ಮಾಡಿಕೊಂಡಿತ್ತು. ಕಡಲ ಸ್ನಾನಕ್ಕಿಳಿದವರು ಅಲೆಗಳ ಹೊಡೆತಕ್ಕೆ ಸಿಲುಕಿ ಅಪಾಯಕ್ಕೊಳಗಾಗುವುದನ್ನು ತಪ್ಪಿಸಲು ಪೊಲೀಸರು, ಸ್ಥಳೀಯರು, ಹಾಗೂ ಜೀವರಕ್ಷಕ ಪಡೆ ಮುಂದಾಳುಗಳು ಸೂಕ್ತ ಸೂಚನೆಗಳನ್ನು ನೀಡುತ್ತಿದ್ದರು.

ಮಂಗಳೂರಿನ ತಣ್ಣೀರು ಬಾವಿ, ಪಣಂಬೂರು, ಸೇರಿದಂತೆ ವಿವಿದ ಕಡೆಗಳಲ್ಲಿ ಎಳ್ಳಮವಾಸ್ಯೆ ಸಮುದ್ರ ಸ್ನಾನ ನಡೆಯುತ್ತಿದೆ.

Write A Comment