ಕನ್ನಡ ವಾರ್ತೆಗಳು

ರಾಣಿ ಅಬ್ಬಕ್ಕ ರಂಗದರ್ಶಿನಿ ಕಾರ್ಯಕ್ರಮದಲ್ಲಿ ಕಯ್ಯಾರ ನಮನ- ಅಮೃತಾಭಿನಂದನೆ

Pinterest LinkedIn Tumblr

Abbakka_ranga_darshini

ಉಳ್ಳಾಲ, ಡಿ.22: ಕರ್ನಾಟಕ ಕರಾವಳಿಯ ಭಾಗ ಹಲವಾರು ವೈಶಿಷ್ಟಗಳ ಆಗರವಾಗಿದ್ದು, ಈ ನೆಲದಲ್ಲಿ ರಾಷ್ಟ್ರಭಕ್ತಿ, ಸ್ವಾಭಿಮಾನದ ಬದುಕಿಗಾಗಿ ಹೋರಾಡಿದ ಮಹನೀಯರು ಬಹಳಷ್ಟು ಜನ ಚರಿತ್ರೆಯನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ರಾಣಿ ಅಬ್ಬಕ್ಕನ ಚರಿತ್ರೆ ಪ್ರಧಾನವಾಗಿ ಕಂಡುಬರುತ್ತದೆ. ಅಬ್ಬಕ್ಕ ಹೆಸರಿನಲ್ಲಿ ಮೂವರು ರಾಣಿಯರಿದ್ದಾರೆ ಎಂಬ ಗೊಂದಲವಿದೆ. ಅದೇನಿದ್ದರೂ ದೇಶದ ಒಳಿತಿಗಾಗಿ ಹೋರಾಡಿದವರು ಎಂಬ ಧನಾತ್ಮಕ ಚಿಂತನೆ ನಮ್ಮಲ್ಲಿರಲಿ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡ ಮಿಯ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ ಜಂಟಿ ಆಶ್ರಯದಲ್ಲಿ ಅಬ್ಬಕ್ಕ ಉತ್ಸವ ಪೂರ್ವ ಕಾರ್ಯಕ್ರಮ ರಾಣಿ ಅಬ್ಬಕ್ಕ ರಂಗದರ್ಶಿನಿ ಕಾರ್ಯಕ್ರಮದಡಿಯಲ್ಲಿ ಕಯ್ಯಾರ ನಮನ- ಅಮೃತಾಭಿನಂದನ ಹಾಗೂ ವೀರರಾಣಿ ಅಬ್ಬಕ್ಕ ಯಕ್ಷಗಾನ, ನಾಟಕ, ನೃತ್ಯರೂಪಕ ಸಿಡಿ ಬಿಡುಗಡೆ ಸಮಾರಂಭದಲ್ಲಿ ಸಿಡಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉತ್ಸವ ಸಮಿತಿಯ ಗೌರವಾಧ್ಯಕ್ಷ, ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಕಥಾ ಸಂಯೋಜಿತ, ಡಾ. ದಿನಕರ್ ಎಸ್.ಪಚ್ಚನಾಡಿ ಹಾಗೂ ಪುತ್ತೂರು ದೇವರಾಜ ಹೆಗ್ಗಡೆ ರಚಿಸಿರುವ ಹವ್ಯಾಸಿ ಬಳಗ ಕದ್ರಿ ಪ್ರಸ್ತುತಿಯ ‘ಉಳ್ಳಾಲದ ರಾಣಿ ಅಬ್ಬಕ್ಕ’ ಕನ್ನಡ ಯಕ್ಷಗಾನ ಸಿಡಿಯನ್ನು ಖ್ಯಾತ ಯಕ್ಷಗಾನ ಕಲಾವಿದ ಶೀಮಂತೂರು ನಾರಾಯಣ ಶೆಟ್ಟಿ ಲೋಕಾರ್ಪಣೆ ಮಾಡಿದರೆ, ದಿ. ರಾಮ ಕಿರೋಡಿಯನ್ ರಚಿಸಿದ ನಿರಂಜನ ಕೆ.ಸಾಲ್ಯಾನ್ ನಿರ್ದೇಶನದ ಶ್ರೀಮಂಜುನಾಥ ಕಲಾ ಸಂಪದ ಮಂಗಳೂರು ಪ್ರಸ್ತುತಿಯ ‘ತುಳುನಾಡ ತುಡರ್ ಉಳ್ಳಾಲೊದ ಅಬ್ಬಕ್ಕ’ ತುಳು ನಾಟಕ ಸಿಡಿಯನ್ನು ರಂಗಭೂಮಿ ನಿರ್ದೇಶಕ ಸದಾನಂದ ಸುವರ್ಣ ಹಾಗೂ ಡಾ.ಅಮೃತ ಸೋಮೇಶ್ವರ ರಚನೆಯ ವಿದುಷಿ ರಾಜಶ್ರೀ ಉಳ್ಳಾಲ ನಿರ್ದೇಶನದ ನಾಟ್ಯನಿಕೇತನ ಕೋಟೆಕಾರು ಪ್ರಸ್ತುತಿಯ ‘ವೀರರಾಣಿ ಅಬ್ಬಕ್ಕದೇವಿ’ ಕನ್ನಡ ನೃತ್ಯರೂಪಕ ಸಿಡಿಯನ್ನು ಪತ್ರಕರ್ತ ಅನಂತಪುರ ಈಶ್ವರಯ್ಯ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಉಳ್ಳಾಲ ಪುರಸಭಾಧ್ಯಕ್ಷೆ ಗಿರಿಜಾ ಎಂ. ಬಾ., ಉಪಾಧ್ಯಕ್ಷೆ ರಝಿಯಾ ಇಬ್ರಾಹೀಂ, ತಾಪಂ ಸದಸ್ಯರಾದ ಧನ್ಯವತಿ ಹಾಗೂ ದೇವಕಿ ರಾಘವ, ಸೋಮೇಶ್ವರ ಗ್ರಾಪಂ ಅಧ್ಯಕ್ಷೆ ರಮಣಿ, ಜನಪದ ವಿದ್ವಾಂಸ ಡಾ.ವಾಮನ ನಂದಾವರ, ಪ್ರೊ.ಗಂಗಾಧರ ಆಳ್ವ, ಉಳ್ಳಾಲ ಮೊಗವೀರ ಸಂಘದ ಆಧ್ಯಕ್ಷ ಸದಾನಂದ ಬಂಗೇರ, ಲಯನ್ಸ್ ಕ್ಲಬ್ ಛೋಟಾ ಮಂಗಳೂರಿನ ಅಧ್ಯಕ್ಷ ಎಂ.ದಿವಾಕರ್, ಮುಹಮ್ಮದ್ ಮುಕ್ಕಚ್ಚೇರಿ, ಉತ್ಸವ ಸಮಿತಿಯ ಪದಾಧಿಕಾರಿಗಳಾದ ತೋನ್ಸೆ ಪುಷ್ಕಳ್ ಕುಮಾರ್, ಆನಂದ ಅಸೈಗೋಳಿ, ಲಕ್ಷ್ಮೀನಾರಾಯಣ ರೈ ಹರೇಕಳ, ನಿರ್ಮಲ ಕುಮಾರ್, ಸುವಾಸಿನಿ ಬಬ್ಬುಕಟ್ಟೆ , ಪದ್ಮಾವತಿ ಅಮೀನ್, ಮಲ್ಲಿಕಾ ಭಂಡಾರಿ, ಎ.ಎ.ಹೈದರ್ ಪರ್ತಿಪ್ಪಾಡಿ, ಧನಲಕ್ಷ್ಮೀ ಪಿಲಾರ್, ದೇವಕಿ ಉಳ್ಳಾಲ್, ವಿಜಯಲಕ್ಷ್ಮೀ ಶೆಟ್ಟಿ ಹಾಗೂ ರತ್ನಾವತಿ ಬೈಕಾಡಿ ಮತ್ತಿತರರು ಉಪಸ್ಥಿತರಿದ್ದರು.

ಯಕ್ಷಗಾನ, ನಾಟಕ ಹಾಗೂ ನೃತ್ಯರೂಪಕದ ಸಿಡಿ ಕುರಿತಾಗಿ ಉತ್ಸವ ಸಮಿತಿಯ ಸಂಚಾಲಕ ಅಬ್ದುಲ್ ಅಝೀಝ್ ಹಕ್ ಮಾತನಾಡಿದರು. ಇದಕ್ಕೂ ಮುನ್ನ ಶತಾಯುಷಿ ಕವಿ, ಸಾಹಿತಿ, ವಿದ್ವಾಂಸ ಕಯ್ಯಾರ ಕಿಞ್ಞಣ್ಣ ರೈಯವರನ್ನು ಅವರ ನಿವಾಸದಲ್ಲಿ ಅಬ್ಬಕ್ಕ ಉತ್ಸವ ಸಮಿತಿ ಪದಾಧಿ ಕಾರಿಗಳು ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಹಾಗೂ ಡಾ.ಅಮೃತ ಸೋಮೇಶ್ವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ಜನಪದ ವಿದ್ವಾಂಸ ಡಾ.ಅಮೃತ ಸೋಮೇಶ್ವರ ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಸಂಯೋಜಕ, ಗೋಕರ್ಣನಾಥ ಕಾಲೇಜಿನ ಉಪನ್ಯಾಸಕ ಡಾ.ದಿನಕರ್ ಎಸ್.ಪಚ್ಚನಾಡಿ, ನಾಟಕ ಸಂಯೋ ಜಕ ಪ್ರಶಾಂತ್ ಜೈನ್ ಹಾಗೂ ನರೇಂದ್ರ ಕಿರೋಡಿಯನ್ ಹಾಗೂ ನೃತ್ಯರೂಪಕದ ನಿರ್ದೇಶಕಿ ಹಾಗೂ ಪಾತ್ರಧಾರಿ ವಿದುಷಿ ರಾಜಶ್ರೀ ಉಳ್ಳಾಲ್ ಹಾಗೂ ಕರ್ನಾಟಕ ಕಲಾತಿಲಕ ಉಳ್ಳಾಲ ಮೋಹನ್ ಕುಮಾರ್‌ರನ್ನು ಸನ್ಮಾನಿಸಲಾಯಿತು.

ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ದಿನಕರ್ ಉಳ್ಳಾಲ್ ಸ್ವಾಗತಿಸಿದರು. ಸ್ವಾಗತಾಧ್ಯಕ್ಷ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯ ದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯ ಕ್ರಮ ನಿರೂಪಿಸಿದರು. ನಮಿತಾ ಶ್ಯಾಂ ವಂದಿಸಿದರು.

Write A Comment