ಕನ್ನಡ ವಾರ್ತೆಗಳು

ಸರ್ಕಾರಿ ವೈದ್ಯರ ವೇತನ 45 ಸಾವಿರ ರೂ. ಏರಿಕೆಗೆ ಶಿಫಾರಸು : ಯು.ಟಿ ಖಾದರ್.

Pinterest LinkedIn Tumblr

khader_press_meet_1

ಮಂಗಳೂರು,ಡಿ.16: ರಾಜ್ಯದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಎದುರಿಸುತ್ತಿದ್ದ ಅಭದ್ರತೆ ನಿವಾರಿಸಲು ಕ್ರಮ ಕೈಗೊಳ್ಳಲಾಗಿದ್ದು, ಈ ವೈದ್ಯರ ವೇತನವನ್ನು 28 ಸಾವಿರ ರೂ.ಗೆ ನಿಗದಿ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.

khader_press_meet_2

ಮುಂದೆ ವೈದ್ಯರ ವೇತನ ಪರಿಷ್ಕರಣೆ ಸಂದರ್ಭ ಗುತ್ತಿಗೆ ವೈದ್ಯರ ವೇತನ 45 ಸಾವಿರ ರೂ.ಗೆ ಏರಿಕೆ ಮಾಡಲು ಶಿಫಾರಸು ಮಾಡಲಾಗಿದ್ದು, ಈ ಕುರಿತಾದ ಕಡತ ಸದ್ಯ ಹಣಕಾಸು ಸಮಿತಿ ಹಂತದಲ್ಲಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ವೈದ್ಯರ ಮೂರು ವರ್ಷಗಳ ಸೇವೆ ಬಳಿಕ ಅವರನ್ನು ಇಲಾಖೆಯಲ್ಲಿ ಕಾಯಂ ಮಾಡಲಾಗುವುದು. ಹಾಗಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ವೈದ್ಯರಿಗೆ ಆಹ್ವಾನ ನೀಡುತ್ತಿರುವುದಾಗಿ ನಗರದಲ್ಲಿ ಸೋಮವಾರ ಹೇಳಿದರು.

khader_press_meet_3

ಇದೇ ವೇಳೆ ಇಲಾಖೆಯ ಎಂಬಿಬಿಎಸ್ ವೈದ್ಯರ ವೇತನವನ್ನು 52 ಸಾವಿರ ರೂ.ನಿಂದ 70 ಸಾವಿರ ರೂ.ಗೆ ಏರಿಕೆ ಮಾಡಲು ಶಿಫಾರಸು ಮಾಡಲಾಗಿದೆ. ಎನ್‌ಆರ್‌ಎಚ್‌ಎಂನಡಿ ಗುತ್ತಿಗೆ ಆಧಾರದ ವೈದ್ಯರಿಗೆ ವೇತನವನ್ನು 28 ಸಾವಿರ ರೂ.ನಿಂದ 45 ಸಾವಿರ ರೂ.ಗೆ ಏರಿಕೆ ಮಾಡಲು ರಾಜ್ಯದಲ್ಲಿ ಅನುಮೋದನೆ ಪಡೆಯಲಾಗಿದೆ. ಆದರೆ ಇತರ ರಾಜ್ಯಗಳಲ್ಲಿ ಈ ಯೋಜನೆಯಡಿ ನಿಗದಿಪಡಿಸಲಾಗುವ ವೇತನ ಪರಿಶೀಲಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವ ಖಾದರ್ ನುಡಿದರು.

Write A Comment