ಕನ್ನಡ ವಾರ್ತೆಗಳು

ಪಣಂಬೂರು ಬೀಚ್‌ನಲ್ಲಿ ಮನರಂಜಿಸಿದ `ನಮ್ಮ ಟಿ.ವಿ.’ ಡ್ಯಾನ್ಸ್ ಟು ಡ್ಯಾನ್ಸ್ ಫೈನಲ್

Pinterest LinkedIn Tumblr

Beach_Dance_Dance_1

ವರದಿ /ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು :ಕರಾವಳಿ ಕರ್ನಾಟಕದ ಜನಪ್ರಿಯ ವಾಹಿನಿ `ನಮ್ಮ ಟಿ.ವಿ ಸಹಯೋಗದಲ್ಲಿ ಮಂಗಳೂರಿನ ಬಾಯ್ಸ್ ಝೋನ್ ಡಾನ್ಸ್ ಅಕಾಡಮಿ ವತಿಯಿಂದ `ಡಾನ್ಸ್ ಟು ಡಾನ್ಸ್-ಸೀಸನ್ 2′ ವಿಶಿಷ್ಟ ಮತ್ತು ಮನೋರಂಜನಾತ್ಮಕ ನೃತ್ಯ ವೈವಿಧ್ಯ ಕಾರ್ಯಕ್ರಮ ಬಾನುವಾರ ಪಣಂಬೂರು ಬೀಚ್ ನಲ್ಲಿ ಜರಗಿತು.

ಝಲಕ್ ದಿಕ್ಲಾಜ, ಸೆವೆನ್ ಅಪ್ ಡಾನ್ಸ್ ಫಾರ್ ಮಿ ಸಹಿತ ಹಲವಾರು ರಾಷ್ಟ್ರೀಯ ಅಂತರಾಷ್ಟ್ರೀಯ ಟಿವಿ ರಿಯಾಲಿಟಿಶೋಗಳಲ್ಲಿ ಬಹುಮಾನಗಳನ್ನು ಬಾಚಿಕೊಂಡ ಮಂಗಳೂರಿನ ಖ್ಯಾತ ಸಾಂಸ್ಕೃತಿಕ ಪ್ರತಿಭೆಗಳನ್ನು ಹೊಂದಿರುವ ಬಾಯ್ಸ್ ಝೋನ್ ಡಾನ್ಸ್ ಅಕಾಡಮಿ ಅಶ್ರಯದಲ್ಲಿ ಮುಂಬಯಿ ಮತ್ತು ಬೆಂಗಳೂರಿನ ಜನಪ್ರಿಯ ತಾರೆಯರ ಸಮಾಗಮದೊಂದಿಗೆ ಹಾಗೂ ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ, ನಾಡಿನ ಗಣ್ಯ ಮುಖಂಡರ ಉಪಸ್ಥಿತಿಯಲ್ಲಿ ನಡೆದ ಈ ಡಿ2ಡಿ ಮೆಗಾ ಫೈನಲ್ ಕಾರ್ಯಕ್ರಮವು ಪ್ರೇಕ್ಷಕರನ್ನು ಮನೋರಂಜನೆಯ ಮನಮೋಹಕ ಲೋಕಕ್ಕೆ ಕೊಂಡೊಯ್ಯಿತ್ತು.

Beach_Dance_Dance_2 Beach_Dance_Dance_3 Beach_Dance_Dance_4 Beach_Dance_Dance_5 Beach_Dance_Dance_6 Beach_Dance_Dance_7 Beach_Dance_Dance_8 Beach_Dance_Dance_9 Beach_Dance_Dance_10 Beach_Dance_Dance_11 Beach_Dance_Dance_12 Beach_Dance_Dance_13 Beach_Dance_Dance_14 Beach_Dance_Dance_15 Beach_Dance_Dance_16 Beach_Dance_Dance_17 Beach_Dance_Dance_18 Beach_Dance_Dance_19 Beach_Dance_Dance_20

ವಿಶೇಷ ಅತಿಥಿಗಳಾಗಿ ದುಬೈಯ ಖ್ಯಾತ ಉದ್ಯಮಿ ಹಾಗೂ ಹೆಸರಾಂತ ಗಾಯಕ ಹರೀಶ್ ಶೇರಿಗಾರ್ ದುಬೈ, ಸರ್ವೋತ್ತಮ ಶೆಟ್ಟಿ ದುಬೈ, ಚೇತನ್ ಶೆಟ್ಟಿ ದುಬೈ, ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಮೇಯರ್ ಮಹಾಬಲ ಮಾರ್ಲ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಂದೀಪ್ ಶೆಟ್ಟಿ ನಟನೆಯ “ಸಕತ್” ಕನ್ನಡ ಸಿನಿಮಾದ ಫೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈಗಾಗಲೇ ದೇಶವಿದೇಶಗಳಲ್ಲಿ ನಡೆದಂತಹ ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಅಧ್ಬುತ ಕಂಠಸಿರಿಯ ಮೂಲಕ ಪ್ರಸಿದ್ದಿ ಪಡೆದಿರುವ ದುಬೈಯ ಖ್ಯಾತ ಉದ್ಯಮಿ ಹರೀಶ್ ಸೇರಿಗಾರ್ ಅವರು ಕೊಡುಗೈ ದಾನಿಯಾಗಿಯೂ ಖ್ಯಾತರಾಗಿದ್ದರೆ. ಕನ್ನಡ, ಹಿಂದಿ, ತಮಿಳು,ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡುವ ಮೂಲಕ ಜನಪ್ರಿಯರಾಗಿರುವ ಹರೀಶ್ ಸೇರಿಗಾರ್ ಅವರು ಇಲ್ಲಿ ನಡೆದ “ಡಾನ್ಸ್ ಟು ಡಾನ್ಸ್-ಸೀಸನ್ 2′ ಕಾರ್ಯಕ್ರಮದಲ್ಲಿ ಸುಮಧುರವಾದ ಎರಡು ಗೀತೆಯನ್ನು ಹಾಡುವ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದರು.

Beach_Dance_Dance_21 Beach_Dance_Dance_22 Beach_Dance_Dance_23 Beach_Dance_Dance_24 Beach_Dance_Dance_25 Beach_Dance_Dance_26 Beach_Dance_Dance_27 Beach_Dance_Dance_28 Beach_Dance_Dance_29 Beach_Dance_Dance_30 Beach_Dance_Dance_31 Beach_Dance_Dance_32 Beach_Dance_Dance_33 Beach_Dance_Dance_34 Beach_Dance_Dance_35 Beach_Dance_Dance_36 Beach_Dance_Dance_37 Beach_Dance_Dance_38 Beach_Dance_Dance_39 Beach_Dance_Dance_40 Beach_Dance_Dance_41 Beach_Dance_Dance_42 Beach_Dance_Dance_43 Beach_Dance_Dance_44 Beach_Dance_Dance_45 Beach_Dance_Dance_47 Beach_Dance_Dance_48 Beach_Dance_Dance_49 Beach_Dance_Dance_50 Beach_Dance_Dance_51 Beach_Dance_Dance_52 Beach_Dance_Dance_53

ರೂಪೇಶ್ ಶೆಟ್ಟಿ ಹಾಗೂ ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಕ್ರಮವು ಡಿಸೆಂಬರ್ ತಿಂಗಳಿನಿಂದ ನಿರಂತರವಾಗಿ ಜನವರಿ ಕೊನೆಯ ತನಕ ಪ್ರತಿ ಶನಿವಾರ ಸಂಜೆ ಗಂಟೆ 6 ರಿಂದ 7 ರ ತನಕ ಮತ್ತು ರಾತ್ರಿ 10ರಿಂದ 11ರ ತನಕ ಭಾನುವಾರ ಪ್ರತೀದಿನ ಸಂಜೆ 6ರಿಂದ 7ರ ತನಕ ರಾತ್ರಿ 10ರಿಂದ 11ರ ತನಕ ನಮ್ಮ ಟೀವಿಯಲ್ಲಿ ಪ್ರಸಾರವಾಗಲಿದೆ. ಮತ್ತು ಪ್ರತಿ ಶನಿವಾರ ಮಧ್ಯಾಹ್ನ 2ರಿಂದ 4ರ ತನಕ ಮರುಪ್ರಸಾರವಾಗಲಿದೆ ಎಂದು ನಮ್ಮ ಟಿ.ವಿಯ ಮುಖ್ಯಸ್ಥರು ತಿಳಿಸಿದ್ದಾರೆ.

2 Comments

  1. Harish anna…..great!! really we have to admire and respect your passion…also good coverage..

Write A Comment