ಕನ್ನಡ ವಾರ್ತೆಗಳು

ಉಡುಪಿ: ಇಷಿಕಾ ಶೆಟ್ಟಿ ನ್ಯಾಯಾಲಯಕ್ಕೆ ಹಾಜರು

Pinterest LinkedIn Tumblr

ಉಡುಪಿ: ಉಡುಪಿ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್‌ನಿಂದ ನಾಪತ್ತೆಯಾಗಿ ಮುಂಬಯಿಯಲ್ಲಿ ಪತ್ತೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿನಿ ಇಷಿಕಾ ಶೆಟ್ಟಿ ಗುರುವಾರ ಉಡುಪಿ ನ್ಯಾಯಾಲಯಕ್ಕೆ ಹಾಜರಾಗಿದ್ದಾಳೆ.

u

u

u
ಗುರುವಾರ ಸಂಜೆ ನ್ಯಾಯಾಲಯಕ್ಕೆ ತನ್ನ ತಾಯಿಯ ಜತೆಗೆ ನ್ಯಾಯಾಲಯದ ಹಿಂಬಾಗಿಲಿನಿಂದ ಬಂದು ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಿ ಹೋಗಿದ್ದಾಳೆ. ಶಾಲೆಯವರು ನಾಪತ್ತೆಯಾಗಿದ್ದಾಗ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಾಣೆ ದೂರು ದಾಖಲಿಸಿದ್ದರಿಂದ ನ್ಯಾಯಾಲಯಕ್ಕೆ ಹಾಜರಾಗುವುದು ಅನಿವಾರ್ಯವಾಗಿತ್ತು. ಅದರಂತೆ ಇಷಿಕಾ ಹಾಜರಾಗಿದ್ದಾಳೆ.

ಈ ವೇಳೆ ಮಾಧ್ಯಮದವರ ಕಣ್ಣು ತಪ್ಪಿಸಿ ತಾಯಿ ಮಗಳು ಕೋರ್ಟಿಗೆ ಹಾಜರಾಗಿದ್ದರು. ಇಷಿಕಾ ಪೋಷಕರೊಂದಿಗೆ ಇರಲು ಕೋರ್ಟ್ ಆದೇಶಿಸಿದ್ದು ಮೂಲವೊಂದರ ಪ್ರಕಾರ ಪೋಷಕರೊಂದಿಗೆ ವಿದೇಶಕ್ಕೆ ತೆರಳಿ ಅಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಲಿದ್ದಾಳೆಂಬ ಮಹಿತಿಯೂ ಇದೆ.

Write A Comment