ಕನ್ನಡ ವಾರ್ತೆಗಳು

ಮಂಗಳನ ಅಂಗಳದಲ್ಲಿ 154 ಕಿ.ಮೀ. ಅಗಲದ ದೊಡ್ಡ ಕುಳಿಯೊಂದು ಕ್ಯೂರಿಯಾಸಿಟಿ ಕಣ್ಣಿಗೆ

Pinterest LinkedIn Tumblr

mars_curisity_photo

ನವದೆಹಲಿ. ಡಿ. 10 : ಮಂಗಳ ಗ್ರಹ ಮಾನವ ವಾಸಕ್ಕೆ ಯೋಗ್ಯವೇ? ಎಂಬ ಚರ್ಚೆ ಮತ್ತು ಸಂಶೋಧನೆಗಳು ನಡೆಯುತ್ತಿರುವ ಬೆನ್ನಲ್ಲೇ ನಾಸಾದ ಕ್ಯೂರಿಯಾಸಿಟಿ ರೋವರ್ ಕೆಂಪು ಗ್ರಹದಲ್ಲಿ ಹಿಂದೆ ಕೆರೆಯೊಂದಿತ್ತು ಎಂಬುದನ್ನು ಕಂಡುಹಿಡಿದಿದೆ. ಮಂಗಳನ ಅಂಗಳದಲ್ಲಿ ಅಧ್ಯಯನ ನಡೆಸುತ್ತಿರುವ ನಾಸಾದ ಕ್ಯೂರಿಯಾಸಿಟಿ ರೋವರ್ ಕೆಂಪು ಗ್ರಹದಲ್ಲಿ ಬೃಹತ್ ಗಾತ್ರದ ಕೆರೆಯೊಂದಿತ್ತು ಎಂಬ ಮಾಹಿತಿಯನ್ನು ದೃಢಪಡಿಸಿದೆ. ಕೆಂಪು ಗ್ರಹ ಒಂದು ಕಾಲದಲ್ಲಿ ಮಾನವ ವಾಸಯೋಗ್ಯವಾಗಿತ್ತು ಎಂದು ಹೇಳಿದೆ.

154 ಕಿ.ಮೀ. ಅಗಲದ ದೊಡ್ಡ ಕುಳಿಯೊಂದು ಕ್ಯೂರಿಯಾಸಿಟಿ ಕಣ್ಣಿಗೆ ಬಿದ್ದಿದೆ. ಕೆರೆ ಎಂದು ಕರೆಯಲಾಗಿರುವ ಕುಳಿಯಲ್ಲಿ ನೀರಿನಂಶವಿರುವ ಕೆಸರು ಪತ್ತೆಯಾಗಿರುವುದು ಸಂಶೋಧನೆಗೆ ಮತ್ತಷ್ಟು ಪುಷ್ಠಿ ನೀಡಿದೆ. 3.5 ಶತಕೋಟಿ ವರ್ಷದಷ್ಟು ಹಳೆಯದಾದ ಕೆರೆ ಇದಾಗಿದೆ ಎಂದು ಹೇಳಲಾಗಿದೆ. 2012 ರ ಆಗಸ್ಟ್ ನಲ್ಲಿ ಮಂಗಳನ ಮೇಲೆ ಇಳಿದಿರುವ ಕ್ಯೂರಿಯಾಸಿಟಿ ಅನೇಕ ಅಂಶಗಳನ್ನು ಕಂಡುಕೊಳ್ಳುತ್ತ ಮುಂದೆ ಸಾಗುತ್ತಿದೆ. ಪರ್ವತವೊಂದಕ್ಕೆ ತಾಗಿಕೊಂಡಂತೆ ಕೆರೆ ನಿರ್ಮಾಣವಾಗಿತ್ತು. ಕೆಸರಿನ ಅಂಶವು ಕಂಡುಬಂದಿರುವುದರಿಂದ ಸಂಶೋಧನೆಗೆ ಮತ್ತಷ್ಟು ಮುನ್ನಡೆ ಸಿಗಲಿದೆ ಎಂದು ನಾಸಾ ತಿಳಿಸಿದೆ.

Write A Comment