ಕನ್ನಡ ವಾರ್ತೆಗಳು

ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಮುನ್ನೆಚ್ಚರಿಕೆ ಕ್ರಮ :ಡಿ.9ರಿಂದ 11ರವರೆಗೆ ಪ್ರತೀ ಸಂಜೆ ತಾಲೂಕಿನಾದ್ಯಂತ ಮಧ್ಯದಂಗಡಿ ಬಂದ್

Pinterest LinkedIn Tumblr

Bar_Bund_Notice

ಮಂಗಳೂರು : ದಿನಾಂಕ 5 -12-2014 ರಂದು ನಗರದ ಉಳಾಯಿಬೆಟ್ಟು ಪರಿಸರದಲ್ಲಿ ನಡೆದಿರುವ ಅಹಿತಕರ ಘಟನೆಗಳಿಗೆ ಸಂಭಧಿಸಿದ ಕಳೆದ ನಾಲ್ಕೈದು ದಿನಗಳಲ್ಲಿ ಅಹಿತಕರ ಘಟನೆಗಳು ಮುಂದುವರಿದಿರುವುದರಿಂದ ಮಂಗಳೂರು ನಗರದಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಂಗಳೂರು ತಾಲೂಕಿನಾದ್ಯಂತ ಎಲ್ಲಾ ವಿಧದ ಮಧ್ಯದಂಗಡಿಯನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಅದೇಶ ಹೊರಡಿಸಿದ್ದಾರೆ.

ದಿನಾಂಕ 05 -12-2014ರಂದು ನಗರದ ಉಳಾಯಿಬೆಟ್ಟು ಪರಿಸರದಲ್ಲಿ ನಡೆದಿರುವ ಅಹಿತರಕರ ಘಟನೆಗಳಿಗೆ ಸಂಭಧಿಸಿದ ಕಳೆದ ನಾಲ್ಕೈದು ದಿನಗಳಲ್ಲಿ ಅಹಿತಕರ ಘಟನೆಗಳು ಮುಂದುವರಿದಿರುವುದರಿಂದ ಮಂಗಳೂರು ನಗರದಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ವಿಧದ ಮಧ್ಯದಂಗಡಿಗಳನ್ನು ಮುಚ್ಚಲು ಅದೇಶ ನೀಡುವಂತೆ ಮಂಗಳೂರು ನಗರ ಪೊಲೀಸ್ ಅಯುಕ್ತರಾದ ಆರ್. ಹಿತೇಂದ್ರ ಅವರು ಕೋರಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಂಗಳೂರು ಕಮೀಷನರೇಟ್ ವ್ಯಾಫ್ತಿಗೆ ಸಂಬಂಧಿಸಿ ಮಂಗಳೂರು ತಾಲೂಕಿನಾದ್ಯಂತ ದಿನಾಂಕ 09-12-2014 ರ ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯ ತನಕ ಪ್ರತೀ ದಿನ ದಿನಾಂಕ 11-12-2014ರವರೆಗೆ ಎಲ್ಲಾ ವಿಧದ ಮಧ್ಯದಂಗಡಿಗಳನ್ನು ಮುಚ್ಚುವಂತೆ ಅದೇಶ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಅಧಿಸೂಚನೆ :

ಪೊಲೀಸ್ ಆಯುಕ್ತರು, ಮಂಗಳೂರು ನಗರ , ಮಂಗಳೂರು ಇವರ ವರಿದಿಯನ್ನು ಪರಿಶೀಲಿಸಿ, ಮಂಗಳೂರು ನಗರದಾದ್ಯಂತ ಸಾರ್ವಜನಿಕ ಶಾಂತಿ , ಸುವ್ಯವಸ್ಥೆ ಹಾಗೂ ಸುರಕ್ಷತೆಯನ್ನು ಕಾಪಾಡುವ ಸಾರ್ವಜನಿಕ ಹಿತದೃಷ್ಠಿಯಿಂದ ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 21(1) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಎ.ಬಿ ಇಬ್ರಾಹಿಂ, ಐಎ ಎಸ್, ಜಿಲ್ಲಾ ಮ್ಯಾಜಿಸ್ಟ್ರೇಟ್, ದಕ್ಷಿಣ ಕನ್ನಡ ಜಿಲ್ಲೆ ಆದ ನಾನು ದಿನಾಂಕ 09-12-2014 ರಿಂದ 11-12-2014 ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯ ತನಕ ಮಂಗಳೂರು ತಾಲೂಕಿನಾದ್ಯಂತ ಬಾರ್ ಮತ್ತು ರೆಸ್ಟೋರೆಂಟ್ ಮತ್ತು ವೈನ್ ಶಾಪ್ /ಮದ್ಯ ಮಾರಾಟ ಕೇಂದ್ರಗಳನ್ನು ಸೂಚಿತ ಅವಧಿ ಮತ್ತು ದಿನಾಂಕಗಳಂದು ಸೂಚಿಸಿದ ಸಮಯದ ತನಕದ ಅವಧಿಯನ್ನು ಮದ್ಯ ಮುಕ್ತ ದಿನಗಳೆಂದು (ಡ್ರೈಡೇಸ್) ಘೋಷಿಸಿ ಕರ್ನಾಟಕ ಅಬಕಾರಿ ಕಾಯ್ದೆ 1965 ರೆಡಿ ಕಾರ್ಯಚರಿಸುತ್ತಿರುವ ಸನ್ನದು ಅವರಣಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಹಾಗೂ ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಧ್ಯ ಮಾರಾಟ ಕೇಂದ್ರಗಳನ್ನು ಮುಚ್ಚಲು ಅದೇಶಿಸಿ ಈ ಅಧಿಸೂಚನೆಯನ್ನು ಹೊರಡಿಸಿರುತ್ತೇನೆ.

ಈ ಆದೇಶವನ್ನು ಕಟ್ಟು ನಿಟ್ಟಾಗಿ ಜ್ಯಾರಿಗೊಳಿಸುವಂತೆ ದಕ್ಷಿಣ ಜಿಲ್ಲಾ ಅಬಕಾರಿ ಉಪ ಅಯುಕ್ತರಿಗೆ ನಿರ್ದೇಶನ ನೀಡಿದೆ ಹಾಗೂ ನಿಷೇದಾಜ್ಜೆ ಇರುವ ಸಮಯದಲ್ಲಿ ಆ ವ್ಯಾಫ್ತಿಗೊಳಪಟ್ಟ ಬಾರ್ ನ ಬಾಗಿಲುಗಳಿಗೆ ಅಬಕಾರಿ ಇಲಾಖೆಯ ಮೊಹರು (ಸೀಲು) ಗಳನ್ನು ಕಡ್ಡಾಯವಾಗಿ ಮಾಡುವಂತೆ ವ್ಯವಸ್ಥೆಗೊಳಿಸಲು ಅದೇಶಿಸಲಾಗಿದೆ. ಎಂದು ಜಿಲ್ಲಾಧಿಕಾರಿಗಳ ಅದೇಶದಲ್ಲಿ ಉಲ್ಲೇಖಿಸಲಾಗಿದೆ.

Write A Comment