ಕನ್ನಡ ವಾರ್ತೆಗಳು

ಪೊಲೀಸ್ ಅಯುಕ್ತ ಆರ್. ಹಿತೇಂದ್ರರಿಂದ ಆರ್‌ ಎಕ್ಸ್ ಲೈಫ್ ಹರ್‌ಕ್ಯುಲಸ್ ಸೈಕಲ್ ರ್‍ಯಾಲಿಗೆ ಚಾಲನೆ : ಚುಮುಚುಮು ಚಳಿಯಲ್ಲೂ 2200ಕ್ಕೂ ಹೆಚ್ಚು ಮಂದಿಯಿಂದ ಸೈಕಲ್ ಸವಾರಿ

Pinterest LinkedIn Tumblr

Rx_cycle_rally_1

ಮಂಗಳೂರು : ಸ್ವಸ್ತಿ ಆರ್ ಎಕ್ಸ್ ಲೈಫ್ ಟ್ರಸ್ಟ್‌ ಅಶ್ರಯದಲ್ಲಿ 8ನೇ ವರ್ಷದ ಆರ್‌ ಎಕ್ಸ್ ಲೈಫ್ ಹರ್‌ಕ್ಯುಲಸ್ ಸೈಕಲ್ ರ್‍ಯಾಲಿ ಅದಿತ್ಯವಾರ ಮುಂಜಾನೆ ಮಂಗಳೂರಿನಲ್ಲಿ ನಡೆಯಿತು. ನಗರದ ಲೇಡಿಹಿಲ್ ವೃತ್ತದಿಂದ ಆರಂಭಗೊಂಡ ಸುಮಾರು 18 ಕಿ.ಮೀ ದೂರದ ಈ ಸೈಕಲ್ ರ್‍ಯಾಲಿಗೆ ಮಂಗಳೂರು ನಗರ ಪೊಲೀಸ್ ಅಯುಕ್ತಕ ಆರ್. ಹಿತೇಂದ್ರರವರು ಹಸಿರು ನಿಶಾನೆ ತೋರಿಸಿದರು.

Rx_cycle_rally_2

ಐಡಿಯಲ್ ಗ್ರೂಪ್‌ನ ಎಸ್.ಮುಖುಂದ್ ಕಾಮಾತ್, ಬೆಂಗಳೂರೂ ಜ್ಯೋತಿ ಲ್ಯಾಬೋರೇಟರೀಸ್‌ನ ಕೆ.ಉಲ್ಲಾಸ್ ಕಾಮಾತ್, ಟಿ.ಐ ಸೈಕಲ್‌ಸ್ ಆಫ್ ಇಂಡಿಯಾ ಕಂಪನಿ ಚೆನೈ ಇದರ ಬೀನೇಶ್ ಎಎಸ್ಎಮ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು. ಸಂಯೋಜಕರಾದ ಗಿರಿಧರ್ ಕಾಮಾತ್, ನರೇಂದ್ರ ನಾಯಕ್ ಹಾಗೂ ಸುನೀಲ್ ದತ್ತ್ ಪೈ ಉಪಸ್ಥಿತರಿದ್ದರು.

Rx_cycle_rally_3 Rx_cycle_rally_4

ರ್‍ಯಾಲಿಯು ಕೊಟ್ಟಾರ – ಕೂಳೂರು- ತಣ್ಣೀರುಬಾವಿ- ಕೊಟ್ಟಾರ-ಉರ್ವಸ್ಟೋರ್, ಅಶೋಕನಗರ – ಹ್ಯೊಗೈಬೈಲ್- ಸುಲ್ತಾನ್ ಬತ್ತೇರಿ ಮಾರ್ಗವಾಗಿ ಸಾಗಿ ಬೋಳೂರಿನ ಅಮೃತ ವಿದ್ಯಾಲಯಂ ಮೈದಾನದಲ್ಲಿ ಅಂತ್ಯಗೊಂಡಿತ್ತು. 10 ವರ್ಷದಿಂದ 85 ವರ್ಷದವರೆಗಿನವರೆಗಿನ ಸುಮಾರು 2200 ಮಂದಿ ಈ ರ್‍ಯಾಲಿಯಲ್ಲಿ ಭಾಗವಹಿಸಿದರು.

ಇದೇ ಸಂದರ್ಭದಲ್ಲಿ 9 ಮಂದಿ ಲಕ್ಕಿ ಸವಾರರಾದ ಹಿರಿಯ ಪುರುಷ ಸವಾರ 95 ವರ್ಷ ಪ್ರಾಯದ ರಾಮಚಂದ್ರ ರಾವ್, ಹಿರಿಯ ಮಹಿಳಾ ಸವಾರರಾದ ಡಾ. ಸ್ಮಿತಾ, ಶೃತಿ – ಕೆಂಬ್ರಿಡ್ಜ್ ಸ್ಕೂಲ್, ಅದಿತ್ಯಾ ತೇಜ್ – ಅಶೋಕ ವಿದ್ಯಾಲಯ, ನಿಖಿಲ್ – ನಾರಾಯಣ ಗುರು ಸ್ಕೂಲ್, ಮೊಹಮ್ಮದ್ ಸುಹೈಲ್ – ಲೇಡಿಹಿಲ್ ಸ್ಕೂಲ್, ಎಸ್. ಯುತಿಕಾ – ಮಣಿಪಾಲ ಸ್ಕೂಲ್, ಮೊಹಮ್ಮದ್ ಇಶ್ರಾನ್ – ಅಲೋಶಿಯಸ್ ಸ್ಕೂಲ್ ಹಾಗೂ ಒಂ.ಬಿ.ಗೀತೈ ಇವರಿಗೆ ಸೈಕಲ್‌ಗಳನ್ನು ವಿತರಿಸಲಾಯಿತು.

Rx_cycle_rally_5 Rx_cycle_rally_6 Rx_cycle_rally_7 Rx_cycle_rally_8 Rx_cycle_rally_9 Rx_cycle_rally_10 Rx_cycle_rally_11

ರ್‍ಯಾಲಿಯ ಮುಖ್ಯ ಉದ್ದೇಶ :

ರಸ್ತೆ ಸುರಕ್ಷತೆ ಈ ಸಲದ ರ್‍ಯಾಲಿಯ ಉದ್ದೇಶವಾಗಿದ್ದು ” ಸುರಕ್ಷಿತ ರಸ್ತೆ – ಸುರಕ್ಷಿತ ಸವಾರಿ” ಧ್ಯೇಯವಾಕ್ಯ . ನಗರದ ರಸ್ತೆಗಳು ದ್ವಿಚಕ್ರ ವಾಹನ ಸವಾರಿಗೆ ಸುರಕ್ಷಿತವಾಗಿರುವಂತೆ ಸಂಬಂಧ ಪಟ್ಟವರಲ್ಲಿ ಅಗ್ರಹಿಸಲು ಹಾಗೂ ಚತುಷ್ಟಕ್ರ ವಾಹನ ಚಾಲಕರು ಸೈಕಲ್ ಸವಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೇಪಿಸಲು ಈ ರ್‍ಯಾಲಿಯು ಸಹಾಯಕಾರಿಯಾಗಲಿದೆ ಎಂದು ಸ್ವಸ್ತಿ ಆರ್ ಎಕ್ಸ್ ಲೈಫ್ ಟ್ರಸ್ಟ್‌ನ ಟ್ರಸ್ಠಿ ಡಾ. ಗಾಯತ್ರಿ ಭಟ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.

RxLife_Cyle_Race_1 RxLife_Cyle_Race_2 RxLife_Cyle_Race_3 RxLife_Cyle_Race_4 RxLife_Cyle_Race_5 RxLife_Cyle_Race_6

ಸ್ವಯಂ ಸೇವಕರು: ಸುಮಾರು 200 ಸ್ವಯಂ ಸೇವಕರು ಈ ರ್‍ಯಾಲಿಯ ವ್ಯವಸ್ಥೆಯಲ್ಲಿ ಶ್ರಮವಹಿಸಿದ್ದಾರೆ. YHAI, ಟೀಂ ಮಂಗಳೂರು, ಸಿ.ಎ ಸ್ಟೂಡೆಂಟ್ಸ್ ಅಸೋಸಿಯೇಶನ್, ಆರ್ ಎಕ್ಸ್ ಲೈಫ್ ಫ್ಯಾಮಿಲಿ ಹಾಗೂ ಪ್ರಮುಖವಾಗಿ ಮಂಗಳೂರು ಹಾಗೂ ಸುರತ್ಕಲ್ ವಿಭಾಗದ ಪೊಲೀಸರ ಸಹಕಾರದಿಂದ ಈ ರ್‍ಯಾಲಿಯನ್ನು ಅತ್ಯಂತ ಯಶಸ್ವಿಯಾಗಿ ಅಯೋಜಿಸಲಾಯಿತು. ಪ್ರತಿ ಸೈಕಲ್ ಗಳಿಗೂ ನೇತ್ರಾವತಿ ಉಳಿಸಿ ಎಂಬ ಸ್ಟಿಕ್ಕರನ್ನು ಅಂಟಿಸಿ ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧ ಚಿಕ್ಕದಾದ ಜಾಗೃತಿಯನ್ನುಮೂಡಿಸುವ ಕೆಲಸವನ್ನು ಈ ರ್‍ಯಾಲಿ ಮೂಲಕ ಮಾಡಿದ್ದೇವೆ ಎಂದು ಡಾ. ಗಾಯತ್ರಿ ಭಟ್ ಹೇಳಿದರು.

RxLife_Cyle_Race_7 RxLife_Cyle_Race_8 RxLife_Cyle_Race_9 RxLife_Cyle_Race_10 RxLife_Cyle_Race_11 RxLife_Cyle_Race_12 RxLife_Cyle_Race_13 RxLife_Cyle_Race_14 RxLife_Cyle_Race_15 RxLife_Cyle_Race_17 RxLife_Cyle_Race_18 RxLife_Cyle_Race_19 RxLife_Cyle_Race_21 RxLife_Cyle_Race_22 RxLife_Cyle_Race_23 RxLife_Cyle_Race_24

ಫೋಟೊ ಸ್ಪರ್ಧೇ : ವಿಜೇತರಿಗೆ ನಗದು ಬಹುಮಾನ

ಈ ಬಾರಿಯ ರ್‍ಯಾಲಿಯ ಸಂದರ್ಭ ಫೋಟೊ ಸ್ಪರ್ಧೇಯನ್ನು ಅಯೋಜಿಸಲಾಗಿದ್ದು, ರ್‍ಯಾಲಿಯ ಅತ್ಯೂತ್ತಮ ಮೂರು ಛಾಯಚಿತ್ರಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ (ನಗದು) ಬಹುಮಾನ ನೀಡಲಾಗುವುದು. ಒಬ್ಬರಿಗೆ ಮೂರು ಚಿತ್ರಗಳನ್ನು ಕಳಿಸಲು ಅವಕಾಶ ನೀಡಲಾಗಿದ್ದು, ಫೋಟೊವನ್ನು ಡಿಸೆಂಬರ್ 10ರ ಒಳಗೆ ಆರ್.ಎಕ್ಸ್ ಸಂಸ್ಥೆಯ ಕಚೇರಿಗೆ ತಲುಪಿಸಬೇಕು. ಈ ಫೋಟೊ ಸ್ಪರ್ಧೇಯಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಆದರೆ ಮೊಬೈಲ್ ನಲ್ಲಿ ತೆಗೆದ ಚಿತ್ರಗಳಿಗೆ ಅವಕಾಶವಿರಲಿಲ್ಲ. ಸ್ಫರ್ಧೆಗೆ ಯಾವೂದೇ ಪ್ರವೇಶ ಶುಲ್ಕ ಕೂಡ ಇರಲಿಲ್ಲ. ಡಿಸೆಂಬರ್ 20ರಂದು ತೀರ್ಪು ಪ್ರಕಟಿಸಿ, ಬಹುಮಾನ ವಿತರಿಸಲಾಗುವುದು. ದುಬೈಯ ಪ್ರಸಿದ್ಧ ಅಂತಾರ್ಜಾಲ ತಾಣ ಕನ್ನಡಿಗ ವರ್ಲ್ಡ್ ಡಾಟ್ ಕಾಮ್ ( www.kannadigaworld.com )ಈ ನಗದು ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.

1 Comment

  1. congratultion to Rx life trust for organising such a big event suac a systamatic way. personal wishes to M giridhar kamath, narendra nayak, DrGayathribhat,Vandana nayak for organaising the rally. I am very much happy to be part of this rally as volunteer. Thankfull to Mrharish sherigar for sponsoring photo contest of this rally.

    sunil priya gowri

Write A Comment