ಕನ್ನಡ ವಾರ್ತೆಗಳು

ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ದೇಹ ಪೋರ್ಚುಗಲ್‌ಗೆ ರವಾನಿಸಲು ರೋಬರ್ಟ್ ರೊಸಾರಿಯೋ ಕೇಂದ್ರ ಸರಕಾರಕ್ಕೆ ಮನವಿ

Pinterest LinkedIn Tumblr

saint_france_xaciver_1

ಮಂಗಳೂರು,ಡಿ.06: ಗೋವಾದಲ್ಲಿ ರುವ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ದೇಹವನ್ನು ಪೋರ್ಚ್‌ಗಲ್‌ಗೆ ಕಳುಹಿಸುವಂತೆ ಗೋವಾ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ರೋಬರ್ಟ್ ರೊಸಾರಿಯೋ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಡಿದ ಅವರು, ಚರಿತ್ರೆಯಲ್ಲಿ ದಾಖಲಾಗಿರುವಂತೆ ಸ್ಥಳೀಯ ಕೊಂಕಣಿ ಭಾಷೆ ಮಾತಾಡುವ ಜನರ ವಿರುದ್ಧ ಫ್ರಾನ್ಸಿಸ್ ಕ್ಸೇವಿಯರ್ ಇನ್‌ಕ್ವಿಸಿಶನ್ ಪದ್ಧತಿ ಮೂಲಕ ಕ್ರೂರ ಶಿಕ್ಷೆ ವಿಧಿಸಿದ್ದರು ಎಂದು ಆರೋಪಿಸಿದರು.  ಮೃತದೇಹವು ಪೋರ್ಚುಗೀಸರು ಭಾರತೀಯರ ಮೇಲೆ ನಡೆಸಿದ ದಬ್ಬಾಳಿಕೆಯ ಪ್ರತೀಕವಾಗಿದ್ದು, ತಕ್ಷಣ ಅದನ್ನು ಪೋರ್ಚುಗಲ್‌ಗೆ ಕಳುಹಿಸುವಂತೆ ಭಾರತದ ಕೆಥೊಲಿಕ್ ಚರ್ಚ್‌ನ ಮುಖ್ಯ ಸಂಸ್ಥೆ ಸಿಸಿಬಿಐಗೂ ಪತ್ರ ಬರೆದಿ ದ್ದೇನೆ ಎಂದು ಅವರು ಈ ಸಂದರ್ಭ ಹೇಳಿದರು.

ಮೃತದೇಹ ಹಸ್ತಾಂತರಕ್ಕೆ ಒತ್ತಾ ಯಿಸಿ ಗೋವಾದ ಆರ್ಚ್ ಬಿಷಪ್ ಅವರಿಗೂ ಪತ್ರ ಬರೆದಿದ್ದು, ಇದೀಗ ಅಂತರ್ಜಾಲ ಮೂಲಕ ಸಹಿ ಸಂಗ್ರಹ ಅಭಿಯಾನ ನಡೆಸಿ ಪ್ರಧಾನಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಇನ್ನೊಂದು ವಿವಾದದ ಪ್ರಕಾರ ಶವವು ಬೌದ್ಧ ಧರ್ಮಗುರುವಿನದ್ದಾಗಿ ದ್ದು, ಶ್ರೀಲಂಕಾದ ಬೌದ್ಧ ಧರ್ಮೀಯರು ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸಿದರೂ ವ್ಯಾಟಿಕನ್ ಸ್ಪಂದಿಸುತ್ತಿಲ್ಲ ಎಂದವರು ಆರೋಪಿಸಿದರು.

Write A Comment