ಕನ್ನಡ ವಾರ್ತೆಗಳು

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಏಡ್ಸ್ ಸಹಾಯವಾಣಿ 1097 ಚಾಲ್ತಿಗೆ.

Pinterest LinkedIn Tumblr

aids_help_line

ಬೆಂಗಳೂರು,ಡಿ.02: ಪಿರಾಮಲ್ ಫೌಂಡೇಷನ್ ಭಾರತದ ಮೊದಲ ಏಡ್ಸ್ ಸಹಾಯವಾಣಿ 1097 ಚಾಲ್ತಿಗೊಳಿಸಲು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಜೊತೆ ಕೈಜೋಡಿಸಿದ್ದು, ಸದ್ಯದಲ್ಲೇ ಸೇವೆ ಆರಂಭವಾಗಲಿದೆ. ದೇಶದಲ್ಲಿ ಶೇ.80 ಮಹಿಳೆಯರು ಹಾಗೂ ಶೇ.70 ರಷ್ಟು ಪುರುಷರಿಗೆ ಎಚ್‌ಐವಿ, ಏಡ್ಸ್ ಬಗ್ಗೆ ಸೂಕ್ತ ತಿಳವಳಿಕೆ ಇಲ್ಲದ ಕಾರಣ ಅವರಲ್ಲಿ ಜಾಗೃತಿ ಮೂಡಿಸಲು ಸಹಾಯವಾಣಿ ಆರಂಭಿಸುತ್ತಿರುವುದಾಗಿ ಪಿರಾಮಲ್ ಪ್ರತಿಷ್ಠಾನ ತಿಳಿಸಿದೆ.
ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಕನ್ನಡ, ಮರಾಠಿ, ಅಸ್ಸಾಮಿ, ಬೆಂಗಾಳಿ ಭಾಷೆಗಳಲ್ಲಿ ಸಹಾಯವಾಣಿ ಅಗತ್ಯದಲ್ಲಿ ಇರುವವರಿಗೆ ಉತ್ತರಿಸಲಿದೆ ಎಂದು ಪಿರಾಮಲ್ ಮುಖ್ಯಸ್ಥ ಡಾ.ಬಾಲಾಜಿ ಉತ್ಲಾ ಹೇಳಿದ್ದಾರೆ.

Write A Comment