ಕನ್ನಡ ವಾರ್ತೆಗಳು

ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ: 2 ವಿದ್ಯುತ್ ಕಂಬಕ್ಕೆ ಹಾನಿ: ಪರಿಸರದಲ್ಲಿ ವಿದ್ಯುತ್ ವ್ಯತ್ಯಯ

Pinterest LinkedIn Tumblr

ಕುಂದಾಪುರ: ಭಾನುವಾರ ಮುಂಜಾನೆ ಕುಂದಾಪುರದ  ಎಂ. ಕೋಡಿ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರಾನ್ಸ್‌ಫಾರ್ಮರ್ ಮತ್ತು ಅದಕ್ಕೆ ಹೊಂದಿಕೊಂಡಿರುವ 2 ವಿದ್ಯುತ್ ಕಂಬಗಳು, 5 ಆಧಾರಸ್ತಂಭಗಳಿಗೆ ಹಾನಿಯಾದ ಘಟನೆ ನಡೆದಿದ್ದು ದುರಸ್ಥಿ ಕಾರ್ಯ ಇನ್ನೂ ನಡೆಯದ ಕಾರಣ ಕೋಡಿ ೭ ನೇ ವಾರ್ಡ್ ಪರಿಸರದಲ್ಲಿ ವಿದ್ಯುತ್ ವ್ಯತ್ಯಯದಿಂದ ಜನರು ಪರದಾಡುವಂತಾಗಿದೆ.

Kodi_Tranfarmer_Damage Kodi_Tranfarmer_Damage (1) Kodi_Tranfarmer_Damage (2) Kodi_Tranfarmer_Damage (3) Kodi_Tranfarmer_Damage (4) Kodi_Tranfarmer_Damage (5)

ಘಟನೆ ಹಿನ್ನೆಲೆ: ಶಾನಾಡಿ ಎಂಬಲ್ಲಿ ಯಕ್ಷಗಾನ ವೀಕ್ಷಿಸಿ ಕೋಡಿಗೆ ಹಿಂದಿರುಗುತ್ತಿರುವ ವೇಳೆ ಘಟನೆ ಸಂಭವಿಸಿದೆ. ಕಾರಿನಲ್ಲಿ ಪಯಣಿಸುತ್ತಿದ್ದವರ ಪೈಕಿ ರಾಕೇಶ್ ಎಂಬವರಿಗೆ ಗಾಯವಾಗಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಡಿಕ್ಕಿಯಾದ ಪರಿಣಾಮ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್-ಫಾರ್ಮರಿಗೆ ಹಾನಿಯಾದ ಕಾರಥಳದಲ್ಲಿ ವಿದ್ಯುತ್ ಕಡಿತವಾಗಿದೆ. ಮುಖ್ಯ ಕಂಬಗಳು ಹಾನಿಗೊಳಗಾದ ಕಾರಣ ದುರಸ್ಥಿ ಕಾರ್ಯ ಹಿನ್ನಡೆಯಾಗುತ್ತಿದ್ದು  ಸೋಮವಾರ ಸಂಜೆಯವರೆಗೂ ದುರಸ್ಥಿ ಕಾರ್ಯ ನಡೆಯಬೇಕಾಗಿದೆ ಎಂದು ಮೆಸ್ಕಾಂ ಮೂಲಗಳು ತಿಳಿಸಿದೆ. ಆದರೇ ಕಳೆದ ಒಂದು ದಿನಗಳಿ್ಗೂ ಹೆಚ್ಚು ಕಾಲ ವಿದ್ಯುತ್ ನಿಲುಗಡೆಗೊಂಡ ಕಾರಣದಿಂದಾಗಿ ಜನರು ಮಾತ್ರ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

 

Write A Comment