ಕನ್ನಡ ವಾರ್ತೆಗಳು

ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆ ಕಾಂಕ್ರಟೀಕರಣ : ಮೊಯ್ದಿನ್ ಬಾವ

Pinterest LinkedIn Tumblr

Moideen_bava_photo

ಸುರತ್ಕಲ್,ನ.29: : ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಗರದ ಎಲ್ಲಾ ಪ್ರಮುಖ ರಸ್ತೆ ಗಳನ್ನು ಕಾಂಕ್ರಟೀಕರಣ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವಾ ಹೇಳಿದರು.

ಮುಲ್ಲಕಾಡು ಕೋಡ್ದಬ್ಬು ಮುಖ್ಯ ದ್ವಾರದ ಬಳಿ, ಮುಖ್ಯಮಂತ್ರಿಗಳ ಎರಡನೇ ಹಂತದ 100 ಕೋ.ರೂ ಅನುದಾನದಲ್ಲಿ ಬಿಡುಗಡೆಯಾದ 3.ಕೋಟಿ ರೂ ವೆಚ್ಚದ ಕಾಂಕ್ರಟೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಶುಕ್ರವಾರ ಮಾತನಾಡಿದರು.

ಕೊಂಚಾಡಿಯಿಂದ ಕಾವೂರು ದೇವಸ್ಥಾನದವೆರೆಗಿನ ರಸ್ತೆ ಕಾಂಕ್ರಿಟೀಕರಣಕ್ಕೆ ಬಾಕಿಯಿತ್ತು. ಇದೀಗ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೂರನೇ ಹಂತದ 100 ಕೋ.ರೂ ಅನುದಾನದಲ್ಲಿ ಕಾಮಗಾರಿಗಾಗಿ 2 ಕೋಟಿ ರೂ. ಬಿಡುಗಡೆ ಗೊಳಿಸಲು ನಿರ್ಧರಿಸಲಾಗಿದೆ ಎಂದರು. ಈ ರಸ್ತೆಯಾದ ಬಳಿಕ ನಗರದಿಂದ ವಿಮಾನ ನಿಲ್ದಾಣಕ್ಕೆ ಎಲ್ಲಾ ರಸ್ತೆಗಳಿಂದಲೂ ತಲುಪಲು ಸ್ಯಾವಿದೆ ಎಂದರು.

ಮೇಯರ್ ಮಹಾಬಲ ಮಾರ್ಲ ಮಾತನಾಡಿ ಕರೆದೇ ಈ ಕಾಮಗಾರಿ ಆರಂಭಿಸಲಾಗಿದೆ. ಇಲ್ಲಿ ಬಾಕಿ ಉಳಿದ ನೂರು ಮೀಟರ್ ರಸ್ತೆ ಹಾಗೂ ಒಂದು ಕಿರು ಸೇತುವೆಯನ್ನೂ ಬೇರೆ ನಿಧಿ ಬಳಸಿ ಈ ಮಳೆಗಾಲದ ಒಳಗೇ ಪೂರ್ತಿಗೊಳಿಸಲು ಪ್ರಯತ್ನಿಸಲಾಗು ವುದು ಎಂದರು.  ಸ್ಥಳೀಯ ಕಾರ್ಪೊರೇಟರ್ ದೀಪಕ್ ಪೂಜಾರಿ ಮಾತನಾಡಿ, ಕಾಮಗಾರಿ ಮುಗಿಯುವತನಕ ಸಾರ್ವಜನಿಕರಿಗೆ ತುಸು ಅನನುಕೂಲವಾಗುವ ಸಾಧ್ಯತೆಯಿದ್ದು ಸಾರ್ವಜನಿಕರು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಗರ ಯೋಜನೆ ಸ್ಥಾಯೀ ಸಮಿತಿ ಅಧ್ಯಕ್ಷ ಅಶೋಕ್ ಡಿ.., ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಮ.ನ.ಪಾ ಸದಸ್ಯರಾದ ನಾಗವೇಣಿ,ರಾಜೇಶ್, ಮೊಹಮ್ಮದ್, ಹರಿನಾಥ್ ,ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಕಮಲಾಕ್ಷ ಶೆಟ್ಟಿ ಆಕಾಶಭವನ,ಉಮೇಶ್ ನಂದನಪುರ,ಮೊಹಮ್ಮದ್, ಸತೀಶ್ ಅಮೀನ್, ಗಣೇಶ್ ಆಳ್ವ, ಸದಾನಂದ , ಗಂಗಯ್ಯ ಗುರಿಕಾರ , ಕಾಮಗಾರಿಯ ಗುತ್ತಿಗೆದಾರ ಸುಧಾಕರ ಪೂಂಜ, ಹಿದಾಯತ್, ಮಹಾ ನಗರ ಪಾಲಿಕೆ ಪ್ರಭಾರ ಆಯುಕ್ತ ಗೋಕುಲ್‌ದಾಸ್, ಹಿರಿಯ ಅಭಿ ುಂತರುಗಳಾದ ಕಾಂತರಾಜು, ಪ್ರಭಾಕರ್,ಯಶವಂತ್, ಎಇ ಅಮತ್‌ಕುಮಾರ್ ಉಪಸ್ಥಿತರಿದ್ದರು.

Write A Comment