ಕನ್ನಡ ವಾರ್ತೆಗಳು

ಗಾಂಜಾ ಮಾರಾಟ ಯತ್ನ : ಆರೋಪಿ ಪೊಲೀಸರ ವಶ.

Pinterest LinkedIn Tumblr

ganja_areested_one_1

ಮಂಗಳೂರು,ನ.29: ನಗರದ ನೆಹರೂ ಮೈದಾನ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಪಾಂಡೇಶ್ವರ ಠಾಣೆ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ.

ಫರಂಗಿಪೇಟೆ ನಿವಾಸಿ ಸಾದತ್ ಅಲಿ (24) ಬಂಧಿತ ಆರೋಪಿ. ಈತನ ಜತೆಗಿದ್ದ ಮತ್ತೊಬ್ಬ ಆರೋಪಿ ರಮೀಜ್ ಎಂಬಾತ ದಾಳಿ ಸಂದರ್ಭ ಪರಾರಿಯಾಗಿದ್ದಾನೆ. ಬಂಧಿತ ಆರೋಪಿ ಬಳಿಯಿಂದ 365 ಗ್ರಾಂ ತೂಕದ 10 ಸಾವಿರ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment