ಕನ್ನಡ ವಾರ್ತೆಗಳು

ಎಟಿಎಂನಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಅರೋಪಿಯ ಸುಳಿವು ನೀಡಿದವರಿಗೆ ಸರ್ಕಾರದಿಂದ ದ್ವಿಗುಣ ಮೊತ್ತದ ಬಹುಮಾನ.

Pinterest LinkedIn Tumblr

atm5

ಬೆಂಗಳೂರು,ನ.28: ರಾಜ್ಯಾದ್ಯಂತ ತೀವ್ರ ತಲ್ಲಣ ಸೃಷ್ಟಿಸಿದ್ದ ಎಟಿಎಂನಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಹಾಗೂ ದರೋಡೆ ಪ್ರಕರಣದ ಆರೋಪಿಯ ಸುಳಿವು ನೀಡಿದವರಿಗೆ ಬಹುಮಾನದ ಮೊತ್ತವನ್ನು ದ್ವಿಗುಣಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಆರೋಪಿ ಸುಳಿವು ನೀಡಿದವರಿಗೆ ಸರ್ಕಾರ 5 ಲಕ್ಷ ರೂ. ನೀಡುವುದಾಗಿ ಘೋಷಿಸಿತ್ತು. ಈಗ ಬಹುಮಾನದ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಕರಣವೇನು?: 2013ರ ಅಕ್ಟೋಬರ್ 19ರಂದು ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆ ಸರಹದ್ದಿನ ಕಾರ್ಪೊರೇಷನ್ ವೃತ್ತದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್‌ನ ಎಟಿಎಂ ನಲ್ಲಿ ಹಣ ಪಡೆಯಲು ಬಂದಿದ್ದ ಜ್ಯೋತಿ ಉದಯ್ ಎಂಬ ಮಹಿಳೆ ಮೇಲೆ ಅಪರಿಚಿತನೋರ್ವ ಮಾರಣಾಂತಿಕ ಹಲ್ಲೆ ನಡೆಸಿ, ದರೋಡೆ ಮಾಡಿದ್ದ. ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದ ಹಲ್ಲೆ ದೃಶ್ಯ ಮಾಧ್ಯಮಗಳಲ್ಲಿ ಪ್ರದರ್ಶನಗೊಂಡಿತ್ತು. ಈ ದೃಶ್ಯ ರಾಜ್ಯಾದ್ಯಂತ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಆರೋಪಿಯ ಪತ್ತೆಗಾಗಿ ನೂರಾರು ಪೊಲೀಸರ ತಂಡ ರಚಿಸಿ ವಿವಿಧ ರಾಜ್ಯಗಳಿಗೆ ಕಳುಹಿಸಲಾಗಿತ್ತು. ನಿರಂತರ ತನಿಖೆ ನಡೆಸಿದರೂ ಸಿಕ್ಕಿಬಿದ್ದಿಲ್ಲ. ಸಣ್ಣ ಸುಳಿವೂ ಸಿಕ್ಕಿಲ್ಲ. ಇದರಿಂದ ಅಸಹಾಯಕರಾಗಿರುವ ಪೊಲೀಸರು ಬಹುಮಾನದ ಮೊತ್ತ ಏರಿಸಿದ್ದಾರೆ.

Write A Comment