ಕನ್ನಡ ವಾರ್ತೆಗಳು

ಕವಿವಿಯ ಕುಲಪತಿ ಬಿ.ವಾಲೀಕಾರ ವಿರುದ್ಧ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ಆದೇಶ.

Pinterest LinkedIn Tumblr

kvv_chancl;er_walikar

ಧಾರವಾಡ, ನ.27 : ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಪ್ರಕರಣದಲ್ಲಿ ವಿವಿ ವಿಶ್ರಾಂತ ಕುಲಪತಿ ಡಾ.ಎಚ್.ಬಿ.ವಾಲೀಕಾರ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ಅನ್ನು ರದ್ದುಗೊಳಿಸಿ ಧಾರವಾಡದ ಹೈಕೋರ್ಟ್‌ ಪೀಠ ಗುರುವಾರ ಆದೇಶ ಹೊರಡಿಸಿದೆ. ವಿವಿ ಹಗರಣಗಳ ಕುರಿತು ರಾಜ್ಯಪಾಲ ವಜುಭಾಯಿ ವಾಲಾ ಅವರು ನೇಮಕ ಮಾಡಿದ್ದ ಏಕಸದಸ್ಯ ಸಮಿತಿ ನೀಡಿದ ವರದಿಯನ್ವಯ ಕುಲಪತಿ ಸೇರಿ 11 ಜನರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು

ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿದ ಪೊಲೀಸರು ಮೌಲ್ಯಮಾಪನ ಕುಲಸಚಿವ ಡಾ.ಎಚ್.ಟಿ.ಪೋತೆ, ಹಣಕಾಸು ಅಧಿಕಾರಿ ರಾಜಶ್ರೀ ಹಾಗೂ ಕುಲಪತಿಗಳ ಆಪ್ತ ಸಹಾಯಕ ಎಸ್.ಎಲ್.ಬೀಳಗಿ ಮತ್ತು ವಾಲೀಕಾರ ಅವರನ್ನು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಎಲ್ಲರೂ ಬಿಡುಗಡೆಗೊಂಡಿದ್ದರು. ಡಾ.ಎಚ್.ಬಿ.ವಾಲೀಕಾರ ಅವರು ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಧಾರವಾಡದ ಹೈಕೋರ್ಟ್‌ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಕುರಿತ ತೀರ್ಪು ಪ್ರಕಟಗೊಂಡಿದ್ದು, ಎಫ್‌ಐಆರ್ ರದ್ದುಗೊಳಿಸಲಾಗಿದೆ.

ತಡವಾಗಿ ನ್ಯಾಯ ಸಿಕ್ಕಿದೆ : ಹೈಕೋರ್ಟ್‌ ಪೀಠದ ತೀರ್ಪಿನ ನಂತರ ಮಾತನಾಡಿರುವ ಡಾ.ಎಚ್.ಬಿ.ವಾಲೀಕಾರ ಅವರು ನ್ಯಾಯಾಂಗದ ಮೇಲೆ ತಮಗೆ ನಂಬಿಕೆ ಇತ್ತು. ತಡವಾಗಿಯಾದರೂ ತಮಗೆ ನ್ಯಾಯ ದೊರಕಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣಗಳೇನು ?  2010ರ ಜುಲೈ 25ರಿಂದ ಇತ್ತೀಚಿಗೆ ನಡೆದ ವಿಧಾನ ಪರಿಷತ್‌ ಚುನಾವಣೆ ಅವಧಿಯ ತನಕ ವಿವಿಯಲ್ಲಿ 110 ವಿವಿಧ ಹುದ್ದೆ ಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ ಇದರಲ್ಲಿ ಅಕ್ರಮ ನಡೆದಿದೆ ಎಂಬುದುವುದು ಒಂದು ಆರೋಪವಾದರೆ, ವಿವಿಯಲ್ಲಿ ಕಾನೂನು ಉಲ್ಲಂಘನೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಡೆದಿದೆ ಎನ್ನುವುದು ಮತ್ತೊಂದು ಆರೋಪವಾಗಿದೆ.

Write A Comment