ಕನ್ನಡ ವಾರ್ತೆಗಳು

ಲಿಂಗಾ ಚಿತ್ರ ಶೀರ್ಷಿಕೆ ಬಗ್ಗೆ ಅತ್ಯಾಸಕ್ತ ಕಥಾ ಮೂಲ .

Pinterest LinkedIn Tumblr

Rajinikath_lingaa_Movie_tit

ಮುಂಬೈ ಥಡಕಾ : ದಕ್ಷಿಣ ಭಾರತ ಚಿತ್ರರಂಗದವರ ಕಣ್ಣು ಸೂಪರ್ ಸ್ಟಾರ್ ರಜನಿ ಕಾಂತ್ ಅವರ ನಟನೆಯ ಲಿಂಗಾ ಚಿತ್ರದತ್ತಲೇ ಇದೆ. ಅದಕ್ಕೆ ಕಾರಣ ಆ ಚಿತ್ರದ ನಿರ್ಮಾಣದ ವಿಷಯ ಇರ ಬಹುದು, ಆ ಚಿತ್ರದ ಕಥೆ, ರಜನಿ ಅಭಿನಯ ಏನೇ ಇರಲಿ ಆದರು ಸಹಿತ ಲಿಂಗ ಬಹು ನಿರೀಕ್ಷೆಯ ಚಿತ್ರವಾಗಿದೆ . ಎಲ್ಲರ ಗಮನ ಸೆಳೆದಿದೆ. ಈ ಚಿತ್ರ ಶೀರ್ಷಿಕೆ ಬಗ್ಗೆ ಆಸಕ್ತಿಕರ ಸಂಗತಿ ಇದೆ. ಅದು ಸಹಿತ ಲಿಂಗಾ ಚಿತ್ರದ ಬಗ್ಗೆ ಹೆಚ್ಚು ಗಮನ ನೀಡಲು ಸಾಧ್ಯವಾಗಿದೆ ಎಂದೇ ಹೇಳ ಬಹುದಾಗಿದೆ

ರಜನಿಕಾಂತ್ ಈ ಚಿತ್ರದಲ್ಲಿ ದ್ವಿಪಾತ್ರಧಾರಿಯಾಗಿದ್ದಾರೆ. ಅಲ್ಲದೆ ಬ್ರಿಟಿಷರ ಕಾಲದ ಕಥಾ ಹಂದರ ಹೊಂದಿರುವುದು ಸಹಿತ ಈ ಚಿತ್ರದ ಬಗ್ಗೆ ಸಾಕಷ್ಟು ಆಸಕ್ತಿಯನ್ನು ಗರಿಗೆದರಿಸಿದೆ. ಸೂಪರ್ ಸ್ಟಾರ್ ರಜನಿಯನ್ನು ಲಿಂಗಾ ಎನ್ನುವ ಹೆಸರಿನಿಂದ ಕಾಣ ಬಹುದಾಗಿದೆ. ಅದೇ ರೀತಿ ಬ್ರಿಟಿಷರ ಕಾಲದಲ್ಲಿ ನೆಲೆಸಿದ್ದ ರಾಜ ಲಿಂಗೇಶ್ವರ ಎನ್ನುವ ಪಾತ್ರದಲ್ಲಿಯೂ ಸಹಿತ ರಜನಿಕಾಂತ್ ಅವರನ್ನು ಕಾಣ ಬಹುದಾಗಿದೆ.

ಈ ಎರಡು ಜನ್ಮದಲ್ಲಿ ರಜನಿ ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ.ಈರೋಸ್ ಸಂಸ್ಥೆ ಈ ಚಿತ್ರವನ್ನು 170 ಕೋಟಿ ರೂಗಳನ್ನು ನೀಡಿ ವಿತರಣೆಯ ಹಕ್ಕನ್ನು ಪಡೆದಿದೆ. ಆದರೆ ಲಿಂಗಾ ಅನ್ನುವ ಟೈಟಲ್ ಗೆ ರಿಜಿಸ್ಟ್ರೇಶನ್ ಮಾಡಿದಾಗ ಅದು ರಜನಿ ಕಾಂತ್ ಅವರ ಅಳಿಯ ಧನುಷ್ ರಿಜಿಸ್ಟರ್ ಮಾಡಿದ್ದರು. ಸರಿ ಕಥೆಗೆ ಪೂರಕ ಸಂಗತಿಗೆ ಲಿಂಗಾ ಹೆಸರು ಸೂಕ್ತವಾದ್ದರಿಂದ ನಿರ್ದೇಶಕ ಕೆ ಎಸ್ ರವಿಕುಮಾರ್ ಅವರು ಧನುಷ್ ಬಳಿ ಕೇಳಿದಾಗ ಅವರು ಹೆಣ್ಣು ಕೊಟ್ಟ ಮಾವನಿಗೆಂದು ಟೈಟಲ್ ತ್ಯಾಗ ಮಾಡಿದರು. ಈ ರೀತಿ ಲಿಂಗಾ ರಜನಿ ಟೀಮ್ ಕೈ ಸೇರಿತು.ಒಂದು ಟೈಟಲ್ ಹಿಂದೆ ಎಷ್ಟೆಲ್ಲಾ ಕಥೆಗಳು !

Write A Comment