ಕನ್ನಡ ವಾರ್ತೆಗಳು

ಕೋಲಾ ಕಂಪನಿಯ ಗ್ರೀನ್ ಫೀಲ್ಡ್ ಬಾಟ್ಲಿಂಗ್ ಘಟಕ ಸ್ಥಾಪನೆ 250 ಎಕರೆ ಭೂಮಿ ಮಂಜೂರು.

Pinterest LinkedIn Tumblr

coco_cola_photo_1

ಯಾದಗಿರಿ, ನ.24: ಹುಬ್ಬಳ್ಳಿಯಿಂದ ಹೀರೋ ಮೋಟೋಕಾರ್ಪ್ ಲಿ ಕಂಪನಿ ಕಾಲ್ತೆಗೆತದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಬಹುರಾಷ್ಟ್ರೀಯ ಕಂಪನಿಗಳ ಓಲೈಕೆಗೆ ಸರ್ಕಾರ ಮುಂದಾಗಿದೆ. ಲಭ್ಯ ಮಾಹಿತಿ ಪ್ರಕಾರ ಕೋಕಾ ಕೋಲಾ ಕಂಪನಿಗೆ ಸರ್ಕಾರ ಭಾರಿ ಆಫರ್ ನೀಡಿದೆ. ಕಳೆದ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ಘಟಕ ಸ್ಥಾಪನೆ ಮಾಡಲು ಕೋಕಾ ಕೋಲಾ ಕಂಪನಿ ಆರ್ಜಿ ಹಾಕುತ್ತಲೇ ಇದೆ. ಅದರೆ, ಬೆಂಗಳೂರಿನ ಹೊರಗೆ ಮೂಲ ಸೌಕರ್ಯ ಕೊರತೆ ಇರುವುದರಿಂದ ಜೊತೆಗೆ ಕೋಲಾ ಘಟಕಕ್ಕೆ ಹೆಚ್ಚಿನ ನೀರಿನ ಸೌಲಭ್ಯ ಒದಗಿಸಬೇಕಾಗಿರುವುದರಿಂದ ಕೋಲಾ ಕಂಪನಿ ಆರ್ಜಿಯನ್ನು ಸರ್ಕಾರ ಮುಂದೂಡುತ್ತಾ ಬಂದಿತ್ತು. ಅದರೆ, ಈಗ ಯಾದಗಿರಿ ಜಿಲ್ಲೆಯಲ್ಲಿ ಸುಮಾರು 250 ಎಕರೆ ಭೂಮಿಯನ್ನು ಮಂಜೂರು ಮಾಡಿ ಗ್ರೀನ್ ಫೀಲ್ಡ್ ಬಾಟ್ಲಿಂಗ್ ಘಟಕ ಸ್ಥಾಪನೆ ಮಾಡುವಂತೆ ಆಹ್ವಾನಿಸಿದೆ

ಕರ್ನಾಟಕ ಸರ್ಕಾರದ ವಿಳಂಬ ಧೋರಣೆಗೆ ಬೇಸತ್ತ ಅಮೆರಿಕ ಮೂಲದ ಕೋಕಾ ಕೋಲಾ ಕಂಪನಿಯವರು ಇತ್ತೀಚೆಗೆ ತೆಲಂಗಾಣಕ್ಕೆ ಹೋ ಕೋಕಾ ಕೋಲಾ ಕಂಪನಿ ಗಿ ಭೂಮಿ ನೋಡಿಕೊಂಡು ಬಂದಿದರು. ಇದರ ಬೆನ್ನಲ್ಲೇ ಸರ್ಕಾರ ಈ ಆಫರ್ ನೀಡಿದೆ. ಈ ಬಗ್ಗೆ ದಿ ಹಿಂದೂಗೆ ಪ್ರತಿಕ್ರಿಯಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಮಾತನಾಡಿ, ಕೋಕಾ ಕೋಲಾ ಕಂಪನಿ ರಾಜ್ಯದಲ್ಲಿ ಸುಮಾರು 1000 ಕೋಟಿ ರು ಹೂಡಿಕೆ ಮಾಡಲು ಮುಂದಾಗಿದೆ ಎಂದರು.

ಕೆಐಎಡಿಬಿಯಿಂದ ನಿಗದಿತ ಯೋಜನೆಗೆ ಬೇಕಾದ ಭೂಮಿ ಸ್ವಾದೀನಪಡಿಸಿಕೊಳ್ಳುವ ಪ್ರಕ್ರಿಯೆ ಮುಗಿದಿದೆ. ಭೂ ಮಾಲೀಕರಿಗೆ ಚೆಕ್ ವಿತರಣೆ ಕಾರ್ಯ ನಡೆದಿದೆ. ಯಾದಗಿರಿಯ ಕಡೆಚೂರ್ ಗ್ರಾಮದಲ್ಲಿ ಘಟಕ ಸ್ಥಾಪನೆಗೆ ಆಹ್ವಾನಿಸಲಾಗಿದೆ. ಮೂಲಗಳ ಪ್ರಕಾರ ಭೂ ಮಾಲೀಕರಿಗೆ ಪ್ರತಿ ಎಕರೆ 7.5 ಲಕ್ಷ(ರಸ್ತೆ ಬದಿ ಜಮೀನಿಗೆ) ರಿಂದ 6 ಲಕ್ಷ ರು ಪರಿಹಾರ ನೀಡಲಾಗುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಯಾದಗಿರಿಯಲ್ಲಿ ಬಾಟ್ಲಿಂಗ್ ಘಟಕ ಸ್ಥಾಪನೆಗೆ ಅನುಮತಿ ನೀಡಿತ್ತು. ಅದರೆ, ಹೈಕೋರ್ಟಿನಿಂದ ತಡೆಯಾಜ್ಞೆ ಸಿಕ್ಕಿತ್ತು. ಈಗ ತಡೆಯಾಜ್ಞೆ ತೆರವುಗೊಂಡಿತ್ತು. ಕಡೆಚೂರು, ಬಳಿಯಾಳ ಪ್ರದೇಶದ 3,330 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಮಾಳಖೇಡ ಪ್ರದೇಶ ಸಿಮೆಂಟ್ ಕೈಗಾರಿಕೆಗಳ ಜೊತೆಗೆ ಕೋಲಾ ಕಂಪನಿ ಮೇಲೇಳಲಿದೆ. ಹತ್ತಿ, ಜೋಳ, ನೆಲಗಡೆ, ಧಾನ್ಯಗಳನ್ನು ಬೆಳೆಯುವ ಭೂಮಿಯಲ್ಲಿ ಕೋಲಾ ಕಂಪನಿಯ ಬಾಟ್ಲಿಂಗ್ ಘಟಕ ತಲೆ ಎತ್ತಿ ನಿಲ್ಲಲಿದೆ

Write A Comment