ಕನ್ನಡ ವಾರ್ತೆಗಳು

ಕಂಬಳವನ್ನು ನಿಷೇಧ ಹಿನ್ನಲೆಯಲ್ಲಿ ರಾಜಕೀಯ ಮಾಡುವುದು ಬೇಡ :  ರಮಾನಾಥ್ ರೈ

Pinterest LinkedIn Tumblr

congrs_ramantah_rai_1

ಮಂಗಳೂರು,ನ.22:  ಸಂಪ್ರಾದಯಿಕ ಕ್ರೀಡೆಯಾದ ಕಂಬಳದಲ್ಲಿ ಯಾವುದೇ ರೀತಿಯಾದ ಪ್ರಾಣಿ ಹಿಂಸೆ ನಡೆಯುತ್ತಿಲ್ಲ. ಒಂದು ವೇಳೆ ನಡೆಯುತ್ತಿದ್ದರೆ ಅದನ್ನು ತಡೆಯುವ ಕುರಿತು ಕ್ರಮ ಕೈಗೊಳ್ಳ ಬೇಕೆ ಹೊರತು ಕಂಬಳವನ್ನು ನಿಷೇಧ ಹಿನ್ನಲೆಯಲ್ಲಿ ರಾಜಕೀಯ ಮಾಡುವುದು ಬೇಡ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು ಅವರು ಶನಿವಾರ ನಡೆದ ದಕ್ಷಿಣ. ಕನ್ನಡ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪ್ರಾಣಿ ಹಿಂಸೆಯನ್ನು ತಡೆಯುವ ಉದ್ದೇಶದಿಂದ ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕಂಬಳದಲ್ಲಿ ಕೂಡಾ ಪ್ರಾಣಿ ಹಿಂಸೆ ನಡೆಯುತ್ತಿದೆ ಎಂದು ಆನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾವು ಉಡುಪಿ ದಂಡಾಧಿಕಾರಿಯವರಿಗೆ ಪತ್ರ ಬರೆದು ಕಂಬಳ ನಿಷೇಧಿಸುವಂತೆ ಅರ್ಜಿ ಸಲ್ಲಿಸಿದೆ.

congrs_ramantah_rai_2

ಆದರೆ ಸರ್ವೋಚ್ಛ ನ್ಯಾಯಾಲಯದ ಆದೇಶವು ಮೇ. 7ರಂದು ಆಗಿದ್ದು, ಇದೀಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಂಬಳ ಆರಂಭಗೊಳ್ಳುವ ವೇಳೆ ಈ ಆದೇಶವನ್ನು ಕಾರ್ಯರೂಪಕ್ಕೆ ತರುವ ಕೆಲಸವಾಗುತ್ತಿದೆ, ಇದರ ಹಿಂದೆ ರಾಜಕೀಯ ಪಿತೂರಿಯಿದೆ. ಈ ಕೆಲಸವನ್ನು ಯಾವ ಉದ್ದೇಶಕ್ಕಾಗಿ ನಡೆಸುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕಾಗಿದೆ ಎಂದರು.

congrs_ramantah_rai_3

ನಾವು ಕಳೆದ 10 ವರ್ಷಗಳಿಂದ ಈ ಕಂಬಳವನ್ನು ನಡೆಸುಕೊಂಡು ಬಂದಿದ್ದೇವೆ . ನನಗೂ ನೋಟೀಸ್ ನೀಡಿ ಬಂಧಿಸುವ ಹುನ್ನಾರ ನಡೆದಿತ್ತು. ಆದರೆ ಸರ್ವೋಚ್ಛ ನ್ಯಾಯಾಲಯವು ತನ್ನ ಆದೇಶದಲ್ಲಿ ಎಲ್ಲಿಯೂ ಕಂಬಳ ಸ್ಪರ್ಧೆ ಅದರಲ್ಲೂ ಕೋಣ ಸ್ಪರ್ಧೆಯನ್ನು ನಿಬಂಧಿಸಿಲ್ಲ. ಕಂಬಳಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುವ ದಿಸೆಯಲ್ಲಿ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು. ಕಾಂಗ್ರೆಸ್ ನಾಯಕರಾದ ವಿಜಯ ಕುಮಾರ್ ಶೆಟ್ಟಿ, ಎ. ಸಿ. ಭಂಡಾರಿ, ಶಶಿಧರ ಹೆಗ್ಡೆ, ಅಪ್ಪಿ, ನಜೀರ್ ಬಜಾಲ್ ಮೊದಲಾದವರಿದ್ದರು.

Write A Comment