ಕನ್ನಡ ವಾರ್ತೆಗಳು

ನಕಲಿ ಡೈವಿಂಗ್ ಲೈಸನ್ಸ್ ಗೆ ಕಡಿವಾಣ : ನಿತಿನ್ ಗಡ್ಕರಿ.

Pinterest LinkedIn Tumblr

nithin_gadkari_driving_lici

ನವ ದೆಹಲಿ,ನ.22 : ನಕಲಿ ಡ್ರೈವಿಂಗ್ ಲೈಸೆನ್ಸ್ ಹಾವಳಿಗೆ ಕಡಿವಾಣ ಹಾಕಲು ಶೀಘ್ರದಲ್ಲೇ ಚಾಲನಾ ಪರವಾನಗಿ ನೀಡುವ ವ್ಯವಸ್ಥೆಯನ್ನು ಗಣಕೀಕರಿಸುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

”ದೇಶದಲ್ಲಿ ಶೇ 30ರಷ್ಟು ಲೈಸೆನ್ಸ್‌ಗಳು ನಕಲಿ. ಪ್ರಪಂಚದ ಯಾವ ಭಾಗದಲ್ಲೂ ಇಷ್ಟೊಂದು ಪ್ರಮಾಣದ ಬೋಗಸ್ ಪರವಾನಗಿಗಳು ಇಲ್ಲ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಇಡೀ ವ್ಯವಸ್ಥೆಯನ್ನು ಗಣಕೀಕರಿಸುತ್ತೇವೆ. ಚಾಲನಾ ಪರವಾನಗಿ ಕೊಡುವುದಕ್ಕೆ ಮತ್ತು ತಪಾಸಣೆ ಮಾಡುವುದಕ್ಕಾಗಿ ದೇಶಾದ್ಯಂತ ಒಂದು ಸಾವಿರ ಗಣಕೀಕೃತ ಕೇಂದ್ರಗಳನ್ನು ತೆರೆಯಲಾಗುತ್ತದೆ,” ಎಂದು ತಿಳಿಸಿದ್ದಾರೆ.ಇದಲ್ಲದೆ 2016ರಿಂದ ದಿನಕ್ಕೆ 30 ಕಿ.ಮೀ. ರಸ್ತೆ ನಿರ್ಮಾಣ ಮಾಡುವ ಮೂಲಕ ದೇಶದ ರಸ್ತೆ ಸಂಪರ್ಕವನ್ನು ಗಟ್ಟಿಗೊಳಿಸುವುದು ತಮ್ಮ ಕನಸೆಂದು ಗಡ್ಕರಿ ಅವರು ಹೇಳಿದ್ದಾರೆ.

ಸದ್ಯ ದಿನಕ್ಕೆ 3 ಕಿ.ಮೀ. ರಸ್ತೆ ನಿರ್ಮಿಸಲಾಗುತ್ತಿದೆ. ಅದನ್ನು ನೂರು ಪ್ರತಿಶತ ಹೆಚ್ಚಿಸುವುದೂ ಸೇರಿದಂತೆ ಹತ್ತು ಹಲವು ಯೋಜನೆಗಳು ತಾವು ಮಂಡಿಸಲಿರುವ ಹೊಸ ವಿಧೇಯಕದಲ್ಲಿದೆ ಎಂದು ಇಂಗ್ಲಿಷ್ ಪತ್ರಿಕೆಯೊಂದು ಶುಕ್ರವಾರ ಹಮ್ಮಿಕೊಂಡಿದ್ದ ನಾಯಕತ್ವ ಕುರಿತ ಶೃಂಗಸಭೆಯಲ್ಲಿ ಗಡ್ಕರಿ ತಿಳಿಸಿದರು.

Write A Comment