ಬೆಳ್ತಂಗಡಿ, ನ.22: ಜಗತ್ತಿನ ಎಲ್ಲಾ ಧರ್ಮಗಳು, ಸಿದ್ಧಾಂತಗಳು ಸಾರಿರುವುದು ಮಾನವೀಯತೆಯ ಚಿಂತನೆಯನ್ನು. ಧರ್ಮ ಎಂದರೆ ಕೇವಲ ಆಚರಣೆ ಅಲ್ಲ. ಸತ್ಯ ಧರ್ಮದಲ್ಲಿ ಬದುಕುವುದಾಗಿದೆ ಎಂದು ಕರ್ನಾಟಕದ ರಾಜ್ಯಪಾಲ ವಜುಭಾಯಿ ರುಡಭಾಯಿ ವಾಲಾ ಹೇಳಿದರು.
ಅವರಿಂದು ಶ್ರೀ ಕ್ಷೇತ್ರ ಧರ್ಮ ಸ್ಥಳದ ಅಮೃತವರ್ಷಿಣಿಯಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ನಡೆದ ಸರ್ವಧರ್ಮ ಸಮ್ಮೇಳನದ 82ನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಧಾರ್ಮಿಕ ನಾಯಕರುಗಳು ಎಳೆಯ ಮಕ್ಕಳಿಗೂ ಸಂಸ್ಕೃತಿಯ ಸಂದೇಶ ವನ್ನು ನೀಡುವ ಮೂಲಕ ಅವರನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆ ಸಬೇಕು. ಆದರ್ಶಗಳು ಕೇವಲ ಹೇಳು ವುದಕ್ಕಲ್ಲ. ಪ್ರತಿಯೊಬ್ಬರು ಜೀವನ ದಲ್ಲಿ ಅಳವಡಿಸಿಕೊಂಡು ಆತ್ಮ ಸಾಕ್ಷಿಗೆ ಅನುಗುಣವಾಗಿ ಬದುಕಬೇಕು. ಒಳ್ಳೆಯವನಾಗಿ ತೋರ್ಪಡಿಸಿಕೊಳ್ಳು ವುದು ಮುಖ್ಯವಲ್ಲ. ಒಳ್ಳೆಯ ತನವನ್ನು ಮೈಗೂಡಿಸಿಕೊಳ್ಳಬೇಕು ಎಂದ ಅವರು, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸೇವಾ ಚಟುವಟಿಕೆಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರು.
ಭಾರತದ ಮೇಲೆ ಹಲವಾರು ದಾಳಿಗಳು ನಡೆದಿದ್ದರೂ ಇಲ್ಲಿನ ಸಂಸ್ಕೃತಿ ಮಾತ್ರ ಎಂದಿಗೂ ಕಳೆದು ಹೋಗಿಲ್ಲ. ಇಲ್ಲಿ ಮಹಿಳೆಯರಿಗೆ ಗೌರವದ ಸ್ಥಾನ ವನ್ನು ನೀಡಿದ್ದೇವೆ. ಎಲ್ಲೆಡೆ ಸಮಾ ನತೆಯ ಬಗ್ಗೆ ಹೇಳುತ್ತಿದ್ದರೆ ನಾವು ತಾಯಂದಿರೆ ಶ್ರೇಷ್ಠರು ಎಂದು ಭಾವಿಸಿದ್ದೇವೆ ಎಂದು ತಾಯಿಯ ಮಹತ್ವವನ್ನು ವಿವರಿಸುವ ಗುಜರಾತಿ ಕವನವೊಂದನ್ನು ವಾಚಿಸಿದರು. ಅಧ್ಯಕ್ಷತೆ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮವನ್ನು ಅರ್ಥಮಾಡಿಕೊಳ್ಳದೆ ಅದರ ಹೆಸರಿನಲ್ಲಿ ಕಲಹ ಮಾಡುವ ಜನರ ನಡುವೆ ಪ್ರೀತಿ ಸಾಮರಸ್ಯ ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾ ಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಧರ್ಮವು ಲೋಕ ಕಲ್ಯಾಣಕಾರಕವಾಗಿದ್ದು, ಸಾಮಾಜಿಕ ವ್ಯವಸ್ಥೆಯನ್ನು ಎತ್ತಿ ಹಿಡಿದು ಮಾನವ ಜನಾಂಗಕ್ಕೆ ಯೋಗ ಕ್ಷೇಮವನ್ನುಂಟು ಮಾಡಿ ಪ್ರಗತಿಯನ್ನು ಸಾಧಿಸಲು ಸಹಾಯಕ ಎಂದು ಅಭಿಪ್ರಾಯಿಸಿದರು.
‘ಕ್ರೈಸ್ತ ಧರ್ಮದಲ್ಲಿ ಸಮನ್ವಯತೆಯ ದೃಷ್ಟಿ’ ಎಂಬ ವಿಷಯದಲ್ಲಿ ಮಂಗಳೂರು ಸೈಂಟ್ ಜೋಸೆಫ್ ಸೆಮಿನರಿಯ ಆಧ್ಯಾತ್ಮಿಕ ನಿರ್ದೇಶಕ ರೆ.ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಬೌದ್ಧ ಧರ್ಮದಲ್ಲಿ ಸಮನ್ವಯ ಎಂಬ ವಿಷಯದಲ್ಲಿ ಬೆಂಗಳೂರಿನ ಮಹಾಬೋಧಿ ಸೊಸೈಟಿಯ ನಿರ್ದೇ ಶಕ ಡಾ. ಬಿ.ವಿ.ರಾಜಾರಾಮ್, ಇಸ್ಲಾಂ ಧರ್ಮದಲ್ಲಿ ಸಮನ್ವಯ ಎಂಬ ವಿಷಯದಲ್ಲಿ ಪತ್ರಕರ್ತ ಬಿ.ಎಂ.ಹನೀಫ್ ಉಪನ್ಯಾಸ ನೀಡಿದರು.
ಇದೇ ವೇಳೆ ರಾಜ್ಯಪಾಲರನ್ನು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯನ್ನು ಹಾಗೂ ಉಪನ್ಯಾಸಕರು ಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್, ಡಿ. ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಸ್ವಾಗತ ಸಮಿತಿಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ, ಉಪನ್ಯಾಸಕ ಸುನೀಲ್ ಪಂಡಿತ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಶಂಕರನ್ ನಂಬೂದಿರಿ ಯವರ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.ರುಡ್‌ಸೆಟ್ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಪಿ.ಜಗದೀಶಮೂರ್ತಿ ವಂದಿಸಿದರು.