ಕನ್ನಡ ವಾರ್ತೆಗಳು

ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಗಂಗಾಪೂಜೆ

Pinterest LinkedIn Tumblr

Kudroli_Ganga_Puja_1a

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಸೋಮವಾರ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿಯವರ ನೇತ್ರತ್ವದಲ್ಲಿ ಗಂಗಾಪೂಜೆ ನೆರವೇರಿತು.

ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಮುಂಜಾನೆಯಿಂದಲೇ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ಶ್ರೀ ಕ್ಷೇತ್ರದಲ್ಲಿ ಜನಾರ್ಧನ ಪೂಜಾರಿಯವರ ನೇತ್ರತ್ವದಲ್ಲಿ ವಿಶೇಷ ಪೂಜೆ ನಡೆಯಿತು. ತದನಂತರ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಗಂಗಾಪೂಜೆ ನೆರವೇರಿಸಿದ ನೂರಾರು ಮಹಿಳೆಯರು ದೀಪಗಳನ್ನು ಕೈಯಲ್ಲಿ ಬೆಳಗಿಸಿ ನೀರಿನಲ್ಲಿ ಬಿಡುವ ಮೂಲಕ ಭಕ್ತಿಯಿಂದ ಗಂಗಾ ಮಾತೆಗೆ ಗೌರವ ಸಲ್ಲಿಸಿದರು.

Kudroli_Ganga_Puja_2 Kudroli_Ganga_Puja_3 Kudroli_Ganga_Puja_4 Kudroli_Ganga_Puja_5 Kudroli_Ganga_Puja_6 Kudroli_Ganga_Puja_7 Kudroli_Ganga_Puja_8a Kudroli_Ganga_Puja_9 Kudroli_Ganga_Puja_10a

ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಪೂಜಾರಿಯವರು, ಹೆಣ್ಣಿಗೆ ಗೌರವ ಕೊಡುವ ಸಂಪ್ರಾದಾಯವನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರತಿ ವರ್ಷ ನಾವು ಇಲ್ಲಿ ಗಂಗಾ ಪೂಜೆಯನ್ನು ಮಾಡುತ್ತ ಬಂದಿದ್ದೇವೆ. ಮಹಿಳೆಯರಿಗೆ ನಾವು ಹೆಚ್ಚು ಗೌರವ ನೀಡುವುದರಿಂದ ಈ ಪೂಜೆಯಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡು ಅವರೇ ಪೂಜೆ ಸಲ್ಲಿಸುತ್ತಾರೆ. ಪವಿತ್ರ ಗಂಗಾ ಮಾತೆಯನ್ನು ಪೂಜಿಸದರೆ ಸಕಲ ಸೌಭಾಗ್ಯ ಲಭಿಸುತ್ತದೆ ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಗಂಗಾಪೂಜೆಯನ್ನು ಪ್ರತೀ ವರ್ಷ ಆಚರಿಸುತ್ತಿದ್ದೇವೆ ಎಂದು ಹೇಳಿದರು.

Kudroli_Ganga_Puja_11a Kudroli_Ganga_Puja_12a Kudroli_Ganga_Puja_13a Kudroli_Ganga_Puja_14 Kudroli_Ganga_Puja_16a Kudroli_Ganga_Puja_17a Kudroli_Ganga_Puja_18 Kudroli_Ganga_Puja_19a Kudroli_Ganga_Puja_20 Kudroli_Ganga_Puja_21 Kudroli_Ganga_Puja_22 Kudroli_Ganga_Puja_23 Kudroli_Ganga_Puja_24a Kudroli_Ganga_Puja_25

Kudroli_Ganga_Puja_26 Kudroli_Ganga_Puja_27 Kudroli_Ganga_Puja_28 Kudroli_Ganga_Puja_29a Kudroli_Ganga_Puja_30 Kudroli_Ganga_Puja_31 Kudroli_Ganga_Puja_32 Kudroli_Ganga_Puja_33a Kudroli_Ganga_Puja_34a Kudroli_Ganga_Puja_35 Kudroli_Ganga_Puja_36a Kudroli_Ganga_Puja_37a Kudroli_Ganga_Puja_38 Kudroli_Ganga_Puja_39a Kudroli_Ganga_Puja_40a Kudroli_Ganga_Puja_41a Kudroli_Ganga_Puja_43a

ಕುದ್ರೋಳಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್ ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್, ಆರ್ ( ಎಡ್ವಕೇಟ್), ಟ್ರಸ್ಟಿಗಳಾದ ಡಾ. ಬಿ.ಜಿ ಸುವರ್ಣ, ಹರಿಕೃಷ್ಣ ಬಂಟ್ವಾಳ್, ದೇವದಾಸ್, ದೇವೇಂದ್ರ ಪೂಜಾರಿ, ಮಹೇಶ್ಚಂದ್ರ, ಲೀಲಾಕ್ಷ ಕರ್ಕೇರ ಮತ್ತಿತರರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

Write A Comment