ಮಂಗಳೂರು,ನ.17: ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಮಂಗಳೂರು ನಗರ ಕೇಂದ್ರ ಗ್ರಂಥಾಲಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ನಗರದ ಕೇಂದ್ರ ಗ್ರಂಥಾಲಯದಲ್ಲಿ ಸೋಮವಾರ ಮಂಗಳೂರು ವಿವಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಸತ್ಯನಾರಾಯಣ ಮಲ್ಲಿಪಟ್ಟಣ, ಉದ್ಘಾಟಿಸಿ. ತಾಂತ್ರಿಕ ಯುಗ ಮುಂದುವರಿದಿದ್ದು, ಕಂಪ್ಯೂಟರ್, ಮೊಬೈಲ್ ಮೂಲಕವೂ ಪುಸ್ತಕಗಳನ್ನು ಓದಬಹುದು. ಆದರೆ, ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓದುವುದು ಹೆಚ್ಚು ಖುಷಿ ಕೊಡುತ್ತದೆ. ವೈಜ್ಞಾನಿಕ ಬದಲಾವಣೆಯೊಂದಿಗೆ ಗ್ರಂಥದ ಸ್ವರೂಪ ಬದಲಾದರೂ ಓದುವ ಹವ್ಯಾಸದಿಂದ ಯುವಕರು ವಿಮುಖರಾಗಬಾರದು ಎಂದು ಈ ಸಂಧರ್ಭದಲ್ಲಿ ಹೇಳಿದರು
ಮ.ನ.ಪಾ ಮೇಯರ್ ಮಹಾಬಲ ಮಾರ್ಲ ರವರು ನಗರದ ಗ್ರಂಥಾಲಯಗಳ ಅವ್ಯವಸ್ಥೆ ಸರಿಪಡಿಸಲು ಮನಪಾದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಪಮೇಯರ್ ಕವಿತಾ . ಕಾರ್ಪೋರೇಟರ್‌ಗಳಾದ ಎ.ಸಿ.ವಿನಯರಾಜ್, ಕೆ.ಮಹಮ್ಮದ್, ಪೂರ್ಣಿಮಾ, ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಕೆ.ವಾಮನ, ಡಾ.ಕೆ.ದಿವಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನಗರದ ಗ್ರಂಥಾಲಯ ಶಾಖೆಗಳಲ್ಲಿ ಹೆಚ್ಚು ಓದುವಿಕೆಯಲ್ಲಿ ತೊಡಗಿಸಿಕೊಂಡವರಿಗೆ ಉತ್ತಮ ಓದುಗ ಪ್ರಶಸ್ತಿ ನೀಡಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗ್ರಂಥಾಲಯದ ಉಪನಿರ್ದೇಶಕ ರಾಘವೇಂದ್ರ ಕೆ.ವಿ. ಪ್ರಸ್ತಾವನೆ ಮಾಡಿದರು. ಗ್ರಂಥಪಾಲಕಿ ಗಾಯತ್ರಿ ಸ್ವಾಗತಿಸಿದರು. ಬಳಿಕ ಕನ್ನಡ ಕವಿಗೋಷ್ಠಿ ನಡೆಯಿತು.