ಬೆಂಗಳೂರು: ನೂತನ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿಯವರು ಭೇಟಿ ಮಾಡಿ ಕರಾವಳಿ ತೀರದ ಮೀನುಗಾರರ ಬದುಕಿನ ಹಿತದೃಷ್ಟಿಯಿಂದ ಹಲವು ವಿಶೇಷ ಪ್ರಮುಖ ಬೇಡಿಕೆಗಳು ಹಾಗೂ ಮೀನುಗಾರರ ಬದುಕಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೋರಿ ಹಿರಿಯ ನಾಯಕರಾದ ಬಿ. ಕೆ. ಹರಿಪ್ರಸಾದ್ ಅವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕರಿ ರಮೇಶ್ ಕಾಂಚನ್, ಹಿರಿಯ ಮೀನುಗಾರ ಸಂಘದ ಸದಸ್ಯರಾದ ರಾಮ ಕಾಂಚನ್ ಕೊರವಡಿ, ಯೋಗೀಶ್ ಕುಂದರ್, ರವೀಂದ್ರ ಬೀಜಾಡಿ ಮನೆ ಮತ್ತು ಅಶೋಕ್ ಪೂಜಾರಿ ಚಾತ್ರಬೆಟ್ಟು ಉಪಸ್ಥಿತರಿದ್ದರು.
ಮನವಿಯಲ್ಲಿರುವ ಪ್ರಮುಖ ಬೇಡಿಕೆಗಳು: ಮತ್ಸ್ಯಾಶ್ರಯ ಯೋಜನೆ: ಮೀನುಗಾರರ ಮನೆ ನಿರ್ಮಾಣದ ಸಹಾಯಧನವನ್ನು ₹1,20,000 ದಿಂದ ₹3,00,000 ಕ್ಕೆ ಹೆಚ್ಚಿಸುವುದು.
ಮಹಿಳಾ ಮೀನುಗಾರರ ನೆರವು: ಸ್ವಸಹಾಯ ಗುಂಪುಗಳ ಸಾಲಕ್ಕೆ ಸಕಾಲದಲ್ಲಿ ಬಡ್ಡಿ ಸಹಾಯಧನ ಮಂಜೂರು ಮಾಡುವುದು.
ಜೀವರಕ್ಷಕ ಸಾಧನಗಳು: ಆಕಸ್ಮಿಕ ದೋಣಿ ಅಪಘಾತ ತಡೆಯಲು ಅಗತ್ಯ ಜೀವರಕ್ಷಕ ಜಾಕೆಟ್‌ಗಳನ್ನು ಇಲಾಖೆಯಿಂದ ಒದಗಿಸುವುದು.
ತುರ್ತು ಪರಿಹಾರ: ಮೀನುಗಾರಿಕೆಯಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡ ಮೀನುಗಾರರಿಗೆ ತಕ್ಷಣದ ತುರ್ತು ಪರಿಹಾರ ನೀಡುವುದು.
ಸಾಂಪ್ರದಾಯಿಕ ಮೀನುಗಾರಿಕೆಗೆ ಉತ್ತೇಜನ ಮಿನಿ ಕೈರಂಪಣಿ ಬಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಕರಾವಳಿಯ ಪರಂಪರೆಯನ್ನು ಉಳಿಸುವುದು. ಹಾಗೂ ಇನ್ನು ಹಲವು ಬೇಡಿಕೆಗಳನ್ನು ಸಲ್ಲಿಸಲಾಯಿತು.
ಕ್ಷೇತ್ರದ ಶಾಸಕರು ಹಾಗೂ ಸಂಸದರು ಮಾಡಬೇಕಾದ ಜವಾಬ್ದಾರಿಯುತ ಕೆಲಸವನ್ನು, ಸಾಮಾನ್ಯ ಜನರ ಧ್ವನಿಯಾಗಿ ಒಬ್ಬ ಜಾಗೃತ ಜನನಾಯಕ ಅಶೋಕ್ ಪೂಜಾರಿಯವರು ಸ್ವತಃ ಮುಂಚೂಣಿಯಲ್ಲಿ ನಿಂತು ಮಾಡುವ ಮೂಲಕ ಮೀನುಗಾರರ ಹಿತ ಕಾಯಲು ಸದಾ ಶ್ರಮಿಸುತ್ತಿರುವ ಬಗ್ಗೆ ಕರಾವಳಿ ಜನರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
Comments are closed.