ಬೆಂಗಳೂರು: ಮಾರ್ಚ್ 17 ಫವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನುಮದಿನ. ಈ ಹಿನ್ನೆಲೆಯಲ್ಲಿ ದೈವಾಧೀನರಾದ ಪುನೀತ್ ನೆನಪಿನಲ್ಲಿ ಅವರ ನಟನೆಯ ಆಕಾಶ್ ಚಿತ್ರ ಮರು ಬಿಡುಗಡೆಯಾಗುತ್ತಿದೆ. ಇಂದು (ಮಾ.13) ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದು, ಅಭಿಮಾನಿಗಳು ಮತ್ತೊಮ್ಮೆ ತಮ್ಮ ನೆಚ್ಚಿನ ನಟನನ್ನು ತೆರೆಮೇಲೆ ಕಣ್ಣುಂಬಿಕೊಳ್ಳುವ ಅವಕಾಶ ಸಿಕ್ಕಂತಾಗಿದೆ.

ಆಕಾಶ್ ಚಿತ್ರ 2005 ರಲ್ಲಿ ಬಿಡುಗಡೆಯಾಗಿತ್ತು. ಮಹೇಶ್ ಬಾಬು ನಿರ್ದೇಶನದ ಈ ಚಿತ್ರವನ್ನು ಪಾರ್ವತಮ್ಮ ರಾಜಕುಮಾರ್ ನಿರ್ಮಿಸಿದ್ದರು. ಆರ್.ಪಿ. ಪಟ್ನಾಯಕ್ ಸಂಗೀತ ಹಾಡುಗಳು ಹಿಟ್ ಆಗಿದ್ದವು. ಈಗ ಈ ಚಿತ್ರ 20 ವರ್ಷಗಳ ನಂತರ ಮತ್ತೆ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಮೋಹಕತಾರೆ ರಮ್ಯಾ ನಾಯಕಿಯಾಗಿದ್ದರು.
ಪುನೀತ್ ಅವರು ವಿಧಿವಶರಾದ ಬಳಿಕ ಅಪ್ಪು ಹುಟ್ಟುಹಬ್ಬದ ಸಮಯದಲ್ಲಿ ಅವರ ಚಿತ್ರವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಕಳೆದ ವರ್ಷ ಜಾಕಿ ಚಿತ್ರವನ್ನು ರಿ-ರಿಲೀಸ್ ಮಾಡಲಾಗಿತ್ತು.
Comments are closed.