ಕುಂದಾಪುರ: ಈಜಲು ತೆರಳಿದ್ದ ನಾಲ್ವರು ಮಕ್ಕಳಲ್ಲಿ ಮೂವರು ಸಮುದ್ರಪಾಲದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ತು ಬೀಚ್‌ನಲ್ಲಿ ಆ.14ರ ಮಂಗಳವಾರ ಸಂಜೆ ನಡೆದಿದೆ.

ಸ್ಥಳೀಯ ನಿವಾಸಿಗಳಾದ ಸಂಕೇತ್ ದೇವಾಡಿಗ (18), ಸೂರಜ್ ಪೂಜಾರಿ (16), ಆಶೀಶ್ ದೇವಾಡಿಗ (14) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಮೃತದೇಹ ಪತ್ತೆಯಾಗಿದೆ. ಈಜಲು ತೆರಳಿದ್ದ ನಾಲ್ವರಲ್ಲಿ ಓರ್ವ ಪಾರಾಗಿದ್ದಾನೆ.
ಮೃತರಾದ ಸಂಕೇತ್ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಆಶೀಶ್ 9ನೇ ತರಗತಿ, ಸೂರಜ್ ಹತ್ತನೆ ತರಗತಿಯಲ್ಲಿ ಓದುತ್ತಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬೈಂದೂರು ಪಿಎಸ್ಐ ತಿಮ್ಮೇಶ್ ಮೊದಲಾದವರು ಭೇಟಿ ನೀಡಿದ್ದಾರೆ.
Comments are closed.