ದುಬೈ: ಕೆ.ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಹನುಮಾನ್ ಫಿಲ್ಮ್‌ನ ಬ್ಯಾನರ್ ಅಡಿಯಲ್ಲಿ ತಯಾರಾಗುವ ಹೊಸ ಚಿತ್ರದ ಮೂಹೂರ್ತ ಕಾರ್ಯಕ್ರಮವು ದುಬೈನಲ್ಲಿ ನೆರವೇರಿತು.

ಯುಎಇ ಬಂಟ್ಸ್ ನ ಶ್ರೀ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ಮೂಹೂರ್ತ ಕಾರ್ಯಕ್ರಮ ನೆರವೇರಿಸಿದರು. ಯುಎಇ ಬಂಟ್ಸ್ ನ ಮಹಾ ಪೋಷಕರಾದ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ, ಅಬುದಾಬಿ ಕನ್ನಡ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ,ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ದುಬೈ ಆಕ್ಮೆ ಮೆಟಿರಿಯಲ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್ ಕ್ಯಾಮೆರಾಕ್ಕೆ ಚಾಲನೆ ನೀಡಿದರು.
ನಂತರ ಸಿನಿಮಾದ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕ ಕೆ.ಸೂರಜ್ ಶೆಟ್ಟಿ , ನಾಯಕ ನಟ ಗೌತಮ್ ಬಂಗೆರ, ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ , ಧೀರಜ್ ಶೆಟ್ಟಿ ಧೀರಪ್ಪನ್,
ವಿಶ್ವನಾಥ ಶೆಟ್ಟಿ ರಂಗ ಸಾರಥಿ, ದಿವಾಕರ್ ಶೆಟ್ಟಿ ರಾಯಲ್ ವಿಸನ್, ರವಿ ಶೆಟ್ಟಿ ಜನರಲ್ ಸೆಕ್ರೆಟರಿ ಯುಎಇ ಬಂಟ್ಸ್, ರಾಜೇಶ್ ಕುತ್ತಾರ್ ರಾಜರಾಜೇಶ್ವರಿ ಭಜನಾ ಮಂಡಳಿ ದುಬೈ, ಪ್ರೇಮನಾಥ್ ಶೆಟ್ಟಿ ಹೀಟ್ ಶೀಲ್ಡ್ ಉಪಸ್ಥಿತರಿದ್ದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ನಿರ್ದೇಶಕ ಕೆ.ಸೂರಜ್ ಶೆಟ್ಟಿ ಚಿತ್ರದ ಚಿತ್ರಿಕರಣವನ್ನು ಡಿಸೆಂಬರ್ ತಿಂಗಳಲ್ಲಿ ನಡೆಸುವುದಾಗಿ ಮತ್ತು ಮಂಗಳೂರು ಹಾಗೂ ದುಬೈನಲ್ಲಿ ಈ ಚಿತ್ರದ ಚಿತ್ರಿಕರಣವನ್ನು ಮಾಡಲಾಗುವುದು.ಚಿತ್ರದಲ್ಲಿ ನಾಯಕನಾಗಿ ಗೌತಮ್ ಬಂಗೆರ, ನಾಯಕಿಯಾಗಿ ವಿನ್ಸೀತಾ ದೀಯಸ್ ಹಾಗೂ ತುಳು ಚಿತ್ರರಂಗದ ಹಲವರು ಕಲಾವಿದರು ಅಭಿನಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Comments are closed.