ಕರಾವಳಿ

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್: ಆ.17 ರಂದು ಯಡಾಡಿ-ಮತ್ಯಾಡಿ ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ಸಾರ್ವಜನಿಕರಿಗಾಗಿ ಮುದ್ದು ಕೃಷ್ಣ ಸ್ಪರ್ಧೆ

Pinterest LinkedIn Tumblr

ಕುಂದಾಪುರ: ಸುಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ  ಇಂಗ್ಲೀಷ್  ಮೀಡಿಯಂ ಸ್ಕೂಲ್ ಯಡಾಡಿ-ಮತ್ಯಾಡಿ, ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ (ರಿ) ಕುಂದಾಪುರ ಇವರ ಸಹಯೋಗದೊಂದಿಗೆ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸಾರ್ವಜನಿಕರಿಗಾಗಿ ಮುದ್ದು ಕೃಷ್ಣ ಸ್ಪರ್ಧೆಯು  ಆಗಸ್ಟ್ 17 ಭಾನುವಾರದಂದು ಹಮ್ಮಿಕೊಳ್ಳಲಾಗಿದೆ.

ಈ ಸ್ಪರ್ಧೆಯು ಬೆಳಿಗ್ಗೆ 9ಕ್ಕೆ ಸರಿಯಾಗಿ ವಿದ್ಯಾರಣ್ಯ ಕ್ಯಾಂಪಸ್, ಯಡಾಡಿ-ಮತ್ಯಾಡಿಯಲ್ಲಿ ಪ್ರಾರಂಭಗೊಳ್ಳಲಿದೆ.

ಸ್ಪರ್ಧೆಯನ್ನು ಎರಡು ವಿಭಾಗದಲ್ಲಿ ನಡೆಸಲಾಗುತ್ತದೆ.

1)1 ವರ್ಷದಿಂದ 3 ವರ್ಷದ  ವರೆಗಿನ ಮಕ್ಕಳಿಗೆ( ಜೂನಿಯರ್ಸ್)

2) 3 ವರ್ಷದಿಂದ 6 ವರ್ಷದ ವರೆಗಿನ ಮಕ್ಕಳಿಗೆ (ಸೀನಿಯರ್ಸ್)

ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು.

ಪ್ರಥಮ ಬಹುಮಾನ: ರೂ.10,000,

ದ್ವಿತೀಯ ಬಹುಮಾನ: ರೂ.7,500 ಹಾಗೂ

ತೃತೀಯ ಬಹುಮಾನ: ರೂ.5,000 ರಂತೆ ಫಲಕ ಮತ್ತು ಪ್ರಮಾಣ ಪತ್ರದೊಂದಿಗೆ ಹಾಗೂ ಭಾಗವಹಿಸುವ ಪ್ರತಿ ಸ್ಪರ್ಧಿಗಳಿಗೂ ಸ್ಮರಣಿಕೆ ಹಾಗೂ ಪ್ರಶಂಸನಾ ಪತ್ರ ನೀಡಲಾಗುವುದು.

ಸ್ಪರ್ಧೆಯ ವಿಶೇಷ ಸೂಚನೆಗಳು:

*ಮಗುವಿನ ಜನನ ಪ್ರಮಾಣ ಪತ್ರದ ಪ್ರತಿಯನ್ನು ಸ್ಪರ್ಧೆಯ ದಿನ ನೋಂದಣಿ ವಿಭಾಗದಲ್ಲಿ  ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

*ಸ್ಪರ್ಧೆಯಲ್ಲಿ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.

ಆಸಕ್ತರು ದಿನಾಂಕ 15/08/2025 ಶುಕ್ರವಾರದ ಒಳಗೆ ತಮ್ಮ ಮಗುವಿನ ಆಧಾರ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರವನ್ನು 88678 53401, 9964291755 ವಾಟ್ಸಾಪ್‌ ಸಂಖ್ಯೆಗೆ ಕಳುಹಿಸಿದ ನಂತರ ನೋಂದಣಿ ಲಿಂಕ್‌ನ್ನು ಕಳುಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Comments are closed.