ಕರಾವಳಿ

ಎಐಸಿಸಿ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷರಾಗಿ ಅಬ್ದುಲ್ ಮುನೀರ್ ಜನ್ಸಾಲೆ ನೇಮಕ

Pinterest LinkedIn Tumblr

ಉಡುಪಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅನುಮೋದನೆ ಮೇರೆಗೆ ಮೂಲತಃ ಉಡುಪಿ ಜಿಲ್ಲೆಯ ಅಬ್ದುಲ್‌ ಮುನೀರ್ ಜನ್ಸಾಲೆ ಅವರನ್ನು ಎಐಸಿಸಿ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷರನ್ನಾಗಿ ಎಐಸಿಸಿ ಸಂಘಟನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಉಡುಪಿ ಜಿಲ್ಲೆಯ ಸಿದ್ದಾಪುರ ಸಮೀಪದ ಜನ್ಸಾಲೆಯವರದ  ಅಬ್ದುಲ್ ಅವರು ಪರಿಣಾಮಕಾರಿಯಾಗಿ ಸಾಮಾಜಿಕ ಜಾಲತಾಣ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಮಾತನಾಡುತಿದ್ದು ಇವರ ಮಾತುಗಳನ್ನು ಗಮನಿಸಿದ್ದ ಕೆಪಿಸಿಸಿ ಮಾಧ್ಯಮ ತಂಡ 2017ರಲ್ಲೇ ಕೆಪಿಸಿಸಿ ವಕ್ತಾರನಾಗಿ ನೇಮಕ ಮಾಡಿತ್ತು.  ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಲ್ಲಿ ಕ್ಯಾಡರ್ ಮಾದರಿಯಾಗಿ ಕಟ್ಟಬೇಕು ಹಾಗೂ ಅದಕ್ಕೆ ಪಕ್ಷದ ಕಾರ್ಯಕರ್ತರಿಗೆ ಸೂಕ್ತ ತರಬೇತಿಯ ಅವಶ್ಯಕತೆಯ ಬಗ್ಗೆ ಪದೇ ಪದೇ ಪಕ್ಷದ ಮಟ್ಟದಲ್ಲಿ ಚರ್ಚಿಸಿ ಇಂದು ಪಕ್ಷದ ಮಾಸ್ಟರ್ ಟ್ರೈನರ್ ಆಗಿಯೂ ರಾಜ್ಯಾದ್ಯoತ ಪಕ್ಷ ಸಂಘಟನೆಯಲ್ಲಿ ತನ್ನದೇಯಾದ ಸೇವೆಯನ್ನು ಮಾಡಿದ್ದಾರೆ.

 

Comments are closed.