ಕುಂದಾಪುರ: ಆಸರೆ ಟ್ರಸ್ಟ್ (ರಿ) ವಕ್ವಾಡಿ ಇವರ ವತಿಯಿಂದ ಆ.3 ಭಾನುವಾರ ಬೆಳಿಗ್ಗೆ 9 ಗಂಟೆಗೆ ವಕ್ವಾಡಿಯ ಮಹಾಲಿಂಗೇಶ್ವರ ದೇವಸ್ಥಾನದ ಸಬಾಭವನದಲ್ಲಿ ಟ್ರಸ್ಟಿನ ನೇತೃತ್ವದಲ್ಲಿ 10ನೇ ತರಗತಿ ಮೇಲ್ಪಟ್ಟು ವಿವಿಧ ಪದವಿ ತನಕ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮತ್ತು ವಕ್ವಾಡಿಯ ಒಟ್ಟು 3 ಅಂಗನವಾಡಿ ಮಕ್ಕಳಿಗೆ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವೈದ್ಯಕೀಯ ವೆಚ್ಚ ನೀಡಲಾಗುವುದು. ಅಲ್ಲದೆ ಟ್ರಸ್ಟಿನ ಸದಸ್ಯರಾದ ಮಾಲಾಡಿ ರಾಜೀವ್ ಶೆಟ್ಟಿ, ರೋಟೆರಿಯನ್ ವಿಜಯ್ ಕುಮಾರ್ ಶೆಟ್ಟಿ, ರಮಣಿ ಕೆ. ಶೆಟ್ಟಿ, ರಮೇಶ್ ಶೆಟ್ಟಿ ಪುರಾಣಿಬೈಲ್ ಇವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Comments are closed.