ಕರಾವಳಿ

ಉಡುಪಿ ಸಹಕಾರಿ ಲೆಕ್ಕಪರಿಶೋಧನ ಇಲಾಖೆಯ ಉಪನಿರ್ದೇಶಕಿ ರೇಣುಕಾ ಸಹಿತ ಇಬ್ಬರು ಲೋಕಾಯುಕ್ತ ಬಲೆಗೆ

Pinterest LinkedIn Tumblr

ಉಡುಪಿ: ಸೌಹಾರ್ದ ಸಹಕಾರ ಸಂಘದ ಆಡಳಿತ ಚುನಾವಣೆಯ ನಡೆಸಿಕೊಡಲು ಲಂಚದ ಬೇಡಿಕೆ ಇಟ್ಟ ಉಡುಪಿ ಜಿಲ್ಲಾ ಸಹಕಾರಿ ಸಂಘದ ಲೆಕ್ಕ ಪರಿಶೋಧನ ಇಲಾಖೆಯ ಉಪ ನಿರ್ದೇಶಕಿ ರೇಣುಕಾ ಹಾಗೂ ಪ್ರಥಮ ದರ್ಜೆ ಸಹಾಯಕ ಜಯರಾಮ್ ಅವರನ್ನು ಜು.24ರಂದು ಉಡುಪಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಸೌಹಾರ್ದ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ಮಾಡಿ ಕೊಡಲು ತಲಾ 5000 ರಂತೆ ಒಟ್ಟು 10,000ರೂ ಲಂಚಕ್ಕೆ ಬೇಡಿಕೆ ಆರೋಪಿಗಳು ಇಟ್ಟಿದ್ದರು. ಈ ಸಂಬಂಧ ಲಂಚ ನೀಡಲು ಒಪ್ಪದ ಉಡುಪಿಯ ಸೌಹರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರೊಬ್ಬರು ಈ ಕುರಿತು ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು.

ಅದರಂತೆ ರೇಣುಕಾ ಉಡುಪಿಯಲ್ಲಿರುವ ತನ್ನ ಕಚೇರಿಯಲ್ಲಿ ಲಂಚದ ಹಣ ಪಡೆಯುತ್ತಿರುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಚರಣೆಯಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಪ್ರಭಾರ ಪೊಲೀಸ್‌ ಉಪಾಧೀಕ್ಷಕ ಮಂಜುನಾಥ್ ಶಂಕರಹಳ್ಳಿ, ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯಕ್ ಎಂ.ಎನ್‌. ಹಾಗೂ ಮಂಗಳೂರು ಲೋಕಾಯುಕ್ತ ಪೊಲೀಸ್‌ ನಿರೀಕ್ಷಕ ಚಂದ್ರಶೇಖರ ಹಾಗೂ ಉಡುಪಿ ಲೋಕಾಯುಕ್ತ ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್‌, ರೋಹಿತ್, ಸತೀಶ್ ಹಂದಾಡಿ, ಮಲ್ಲಿಕಾ, ಪುಷ್ಪಾವತಿ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ಪ್ರಸನ್ನ ದೇವಾಡಿಗ, ರಮೇಶ್‌, ಸತೀಶ್ ಆಚಾರ್ಯ, ರಾಘವೇಂದ್ರ ಹೊಸಕೋಟೆ, ಸೂರಜ್, ಸುಧೀರ್ ಹಾಗೂ ಮಂಗಳೂರು ಲೋಕಾಯುಕ್ತ ಸಿಬ್ಬಂದಿ ಭಾಗವಹಿಸಿದ್ದರು.

Comments are closed.