ಕರಾವಳಿ

ಕೋಟತಟ್ಟು ಗ್ರಾ.ಪಂ 5ನೇ ವಾರ್ಡ್‌ನ ರಸ್ತೆ, ಚರಂಡಿ ರಚನೆ ‌ಕಾಮಗಾರಿ ವೀಕ್ಷಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಉಡುಪಿ: ಇಲ್ಲಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೆರೆ 5ನೇ ವಾರ್ಡಿನ ರಸ್ತೆ ಕಾಂಕ್ರೀಟೀಕರಣ ಮತ್ತು ಚರಂಡಿ ರಚನೆ ಕಾಮಗಾರಿಗಾಗಿ ಈ ಹಿಂದೆ ತಾನು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಸಮಾಜ ಕಲ್ಯಾಣ ಇಲಾಖೆಯಿಂದ 60 ಲಕ್ಷ ರೂ. ಅನುದಾನವನ್ನು ಒದಗಿಸಿದ್ದ ಪ್ರಸ್ತುತ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯರು ಕಾಮಗಾರಿ ಪರಿಶೀಲನೆ ನಡೆಸಿದರು.

ವ್ಯವಸ್ಥಿತವಾದ ರಸ್ತೆ ಮತ್ತು ಚರಂಡಿ ಕಾಮಗಾರಿಯಿಂದ ಕೃಷಿ ಮಾಡಲು ಅನುಕೂಲಕರವಾದ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಥಳೀಯ ನಿವಾಸಿ ನಾರಾಯಣ ಪಡುಕೆರೆ ಹೇಳಿದರು.

ಸ್ಥಳ ದಾನಿಗಳಿಂದ ಮತ್ತು ಗ್ರಾಮಸ್ಥರ ಸಹಕಾರದಿಂದ ರಸ್ತೆ ಮತ್ತು ಸಮುದ್ರ ಕಿನಾರೆಯ ತನಕ ಚರಂಡಿ ಕಾಮಗಾರಿ ಮಾಡಲು ಸಾಧ್ಯವಾಗಿದೆ. ಕಾಂಕ್ರೀಟ್ ಸಂಪರ್ಕ ರಸ್ತೆಯಿಂದ ಹಲವಾರು ಮನೆಗಳಿಗೆ ಅನುಕೂಲವಾಗಿದೆ ಎಂದು ಕೋಟತಟ್ಟು 5ನೇ ವಾರ್ಡ್ ಸದಸ್ಯೆ ವಿದ್ಯಾ ಸಾಲಿಯಾನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸುಸಂದರ್ಭದಲ್ಲಿ ಪಡುಕೆರೆ ಗ್ರಾಮಸ್ಥರು ಸಂಸದರನ್ನು ಅಭಿನಂದಿಸಿದ್ದು ಕಾಮಗಾರಿಯ ಬಗ್ಗೆ ಸಂಸದ ಕೋಟ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಸದಸ್ಯರಾದ ಪ್ರಮೋದ್ ಹಂದೆ, ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ವಿದ್ಯಾ ಸಾಲಿಯಾನ್, ಜ್ಯೋತಿ, ಸೀತಾ, ಅಶ್ವಿನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಮಾಜಿ ಅಧ್ಯಕ್ಷರಾದ ವಿಶ್ವಪ್ರಕಾಶಿನಿ ಹಂದೆ, ರಘು ತಿಂಗಳಾಯ, ಮಾಜಿ ಸದಸ್ಯರಾದ ರಾಮ ಬಂಗೇರ, ರಮಾನಂದ ಮೆಂಡನ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಣೇಶ್ ಶೆಟ್ಟಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

Comments are closed.