ಕರಾವಳಿ

ಉಡುಪಿಯಲ್ಲಿ ಮಟ್ಕಾ ದಂಧೆ: ಬುಕ್ಕಿ ಲಿಯೋ ಕರ್ನೆಲಿಯೊ ಸಹಿತ ಇಬ್ಬರ ಬಂಧನ!

Pinterest LinkedIn Tumblr

ಉಡುಪಿ: ಜಿಲ್ಲೆಯ ಕುರ್ಕಾಲು ಗ್ರಾಮದ ಶಂಕರಪುರದ ಅಶ್ವತಕಟ್ಟೆ ಬಸ್‌ ನಿಲ್ದಾಣದ ಬಳಿ ಮಟ್ಕಾ ಚೀಟಿ ಬರೆಯುತ್ತಿದ್ದ ವಿಠಲ ದೇವಾಡಿಗ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ವಶದಲ್ಲಿ ಮಟ್ಕಾ ಸಂಖ್ಯೆ ಬರೆದಿರುವ ಚೀಟಿ, ನಗದು, ಪರಿಕರ ಜಪ್ತಿ ಮಾಡಿದ್ದಾರೆ.

ಮಟ್ಕಾ ಚೀಟಿ ನೀಡುವ ಬಗ್ಗೆ ಪೊಲೀಸರ ವಿಚಾರಣೆ ವೇಳೆ, ಜೂಜಾಟದ ಬುಕ್ಕಿ ಉಡುಪಿಯ ಲಿಯೋ ಕರ್ನೆಲಿಯೋ ತಿಳಿಸಿದಂತೆ ತಾನು ಮಟ್ಕಾ ಜುಗಾರಿ ಹಣ ಸಾರ್ವಜನಿಕರಿಂದ ಕಾನೂನು ಬಾಹಿರವಾಗಿ ಸಂಗ್ರಹಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ವಿಠಲ ದೇವಾಡಿಗ ಮತ್ತು ಲಿಯೋ ಕರ್ನೇಲಿಯೋ ಇವರುಗಳು ಸಂಘಟಿತರಾಗಿ ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡಿ ಅವರಿಂದ ಹಣ ಸಂಗ್ರಹ ಮಾಡುತ್ತಿದ್ದುದರ  ವಿರುದ್ದ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊದಲ ಆರೋಪಿ ವಿಠಲ ದೇವಾಡಿಗ ವಿರುದ್ಧ ಈಗಾಗಲೇ 12 ಪ್ರಕರಣಗಳು ದಾಖಲಾಗಿದೆ. ಎರಡನೇ ಆರೋಪಿಯಾದ ಲಿಯೋ ಕರ್ನೇಲಿಯೋ ವಿರುದ್ಧ ಈಗಾಗಲೇ ಸುಮಾರು 34 ಪ್ರಕರಣಗಳು ದಾಖಲಾಗಿದೆ.

 

ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.