ಕುಂದಾಪುರ: ತಲೆ ಇಲ್ಲದ ಶವ ಇದೆ ಎಂದು ಸುಳ್ಳು ಮಾಹಿತಿ ನೀಡಿ ಪೊಲೀಸರನ್ನು ದಿನವಿಡೀ ಅಲೆದಾಡಿಸಿದ ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ಠಾಣೆಯ ಪೊಲೀಸ್ ಉಪನಿರೀಕ್ಷಕ ತಿಮ್ಮೇಶ ಬಿ.ಎನ್. ಠಾಣೆಯಲ್ಲಿರುವಾಗ ಬಾಗಲಕೋಟೆಯ ಪಕೀರಪ್ಪ ಯಲ್ಲಪ್ಪ (30) ಎಂಬಾತ ಬಂದು ಯಡ್ತರೆ ಗ್ರಾಮದ ಮದ್ದೋಡಿ ಗೇರು ಹಾಡಿಯಲ್ಲಿ ತಲೆ ಇಲ್ಲದ ಮನುಷ್ಯನ ದೇಹ ಬಿದ್ದಿದೆ ಎಂದಿದ್ದು ಪೊಲೀಸರು ಆತನ ಜತೆಯಲ್ಲಿ ಹೋಗಿ ಸಾರ್ವಜನಿಕರ ಸಹಕಾರದೊಂದಿಗೆ ಗೇರು ಹಾಡಿಯಲ್ಲಿ ದಿನವಿಡೀ ಹುಡುಕಿದರೂ ಎಲ್ಲಿಯೂ ಮೃತದೇಹ ಕಂಡುಬರಲಿಲ್ಲ. ಆತನು ಬೇರೆ ಬೇರೆ ಕಡೆಯಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಇದೆ, ಇಲ್ಲಿ ಇದೆ ಎಂದು ಹೇಳಿದ್ದು ಎಲ್ಲಿ ಹುಡುಕಿದರೂ ಮೃತ ದೇಹ ಕಾಣಿಸಿರಲಿಲ್ಲ. ಮರುದಿನವೂ ಹುಡುಕಿದ ಪೊಲೀಸರಿಗೆ ಇದು ಸುಳ್ಳು ಸುದ್ದಿ ಎಂಬುದು ತಿಳಿದಿದೆ. ಸುಳ್ಳು ಮಾಹಿತಿ ನೀಡಿದ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Comments are closed.