ಉಡುಪಿ: ಹೊಸ ವರ್ಷಾಚರಣೆ ಸಂಭ್ರಮದ ಹೆಸರಲ್ಲಿ ಅಪಾಯಕಾರಿಯಾಗಿ ವಾಹನ ಚಲಾಯಿಸಿ ಸಾರ್ವಜನಿಕರಿಗೆ ಭಂಗ ಉಂಟುಮಾಡಿದ ಕಾರಣಕ್ಕೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

ಡಿ.31ರ ರಾತ್ರಿ ಮಣಿಪಾಲ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ. ಅವರು ಕರ್ತವ್ಯದಲ್ಲಿರುವ ವೇಳೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ – ಕಾಯಿನ್ ಸರ್ಕಲ್ ನಡುವಿನ ರಸ್ತೆಯಲ್ಲಿ 7 ರಿಂದ 10 ಜನರು ಕಾರು ಹಾಗೂ ದ್ವಿ ಚಕ್ರ ವಾಹನಗಳಲ್ಲಿ ಸವಾರಿ ಮಾಡಿಕೊಂಡು ಅಪಾಯಕಾರಿಯಾಗಿ ಚಾಲನೆ ಮಾಡಿದ್ದಾರೆ.
ಇತರ ವಾಹನಗಳ ಸವಾರರ ಜತೆ ಬಂದು ರಸ್ತೆಯ ಮದ್ಯದಲ್ಲಿ ವಾಹನಗಳನ್ನು ನಿಲ್ಲಿಸಿ ಬೊಬ್ಬೆ ಹಾಕಿ ಕುಣಿದು ಕುಪ್ಪಳಿಸುತ್ತ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿದ್ದಲ್ಲದೆ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ 1 ಕಾರು ಮತ್ತು 8 ಮೋಟಾರ್ ಸೈಕಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಬಗ್ಗೆ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ ಅವರ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರಾದ ರಾಘವೆಂದ್ರ ಸಿ, ಅಕ್ಷಯಾ ಕುಮಾರಿ ಎಸ್.ಎನ್, ಪ್ರೊಬೇಶನರಿ ಪಿಎಸ್ಐ ಲೋಹಿತ್, ಎಎಸ್ಐ ವಿವೇಕಾನಂದ, ಅಬ್ದುಲ್ ರಜಾಕ್, ಪ್ರಸನ್ನ, ಇಮ್ರಾನ್, ಮಂಜುನಾಥ ಎಂ.ಆರ್, ಚನ್ನೇಶ್ ಕೆ. ಹೆಚ್, ಬಸವರಾಜ್ ಶೆಟ್ಟಿ, ಅವರನ್ನೊಳಗೊಂಡ ತಂಡ ಘಟನೆಗೆ ಸಂಬಂದಿಸಿದ ಸಾಮಾಜಿಕ ಜಾಲತಾಣದ ವಿಡಿಯೋ ದೃಶ್ಯಾವಳಿಗಳನ್ನು ಪರೀಶೀಲಿಸಿ ಆರೋಪಿಗಳ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂದಪಟ್ಟ ವಾಹನಗಳನ್ನು ಪತ್ತೆ ಮಾಡಿದ್ದು 14 ಜನ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ತನಿಖೆ ಕೈಗೊಂಡಿದ್ದಾರೆ.
Comments are closed.