ಉಡುಪಿ: ಟ್ರೇಡಿಂಗ್ ಲಿಂಕ್ ಮೂಲಕ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ.

ಕಾರ್ಕಳದ ರಜಿನಿ ಅವರನ್ನು ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಂ ಅಪ್ಲಿಕೇಶನ್ ಮೂಲಕ ಸಂಪರ್ಕಿಸಿ ಮನೆಯಲ್ಲಿಯೇ ಉದ್ಯೋಗ ನೀಡುವ ಆಸೆ ತೋರಿಸಿ ಟ್ರೇಡಿಂಗ್ ಲಿಂಕ್ ಕಳುಹಿಸಿದ್ದರು.
ಇದನ್ನು ನಂಬಿದ ಅವರು ಅದರಲ್ಲಿದ್ದ ಟಾಸ್ಕ್ ಪೂರ್ಣಗೊಳಿಸಿದ್ದು, ಆ ಬಳಿಕ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ 1,43,001 ರೂ. ಗಳನ್ನು ವರ್ಗಾಯಿಸಿ ಕೊಂಡು ವಂಚಿಸಲಾಗಿದೆ.
ಈ ಬಗ್ಗೆ ಮಹಿಳೆ ರಜಿನಿ ಅವರು ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.