ಉಡುಪಿ: ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟು ಡಿ. 19ರಂದು ಬೆಳಗ್ಗೆ ಮಲ್ಪೆಯಿಂದ ನೇರ 26 ಮಾರು ಆಳ ದೂರದಲ್ಲಿ ಮುಳುಗಡೆಯಾಗಿದೆ. ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ಬೇರೆ ಬೋಟಿನವರು ರಕ್ಷಿಸಿದ್ದಾರೆ.

ಕಡೆಕಾರು ರಕ್ಷಾ ಅವರಿಗೆ ಸೇರಿದ ಶ್ರೀ ನಾರಾಯಣ- ಐಐ ಬೋಟು ಡಿ. 12ರಂದು ರಾತ್ರಿ ಮಲ್ಪೆ ಬಂದರಿನಿಂದ ತೆರಳಿತ್ತು. ಡಿ. 19ರಂದು ಬೆಳಗ್ಗೆ 6.30ರ ವೇಳೆಗೆ ಮೀನುಗಾರಿಕೆ ನಡೆಸುವಾಗ ನೀರಿನಡಿಯಲ್ಲಿದ್ದ ಯಾವುದೋ ವಸ್ತು ಬೋಟ್‌ನ ತಳ ಒಡೆದು ನೀರು ನುಗ್ಗಲಾರಂಭಿಸಿತು. ತತ್‌ಕ್ಷಣ ಬೋಟಿನ ತಂಡೇಲ ವಯರ್‌ಲೆಸ್ ಮೂಲಕ ಇತರ ಬೋಟ್‌ಗಳಿಗೆ ಸಂದೇಶ ನೀಡಿದರು. ಶ್ರೀ ಮೂಕಾಂಬಿಕಾ ಅನುಗ್ರಹ ಬೋಟಿನವನರು ಧಾವಿಸಿ ಬಂದು ಮುಳುಗುತ್ತಿರುವ ಬೋಟನ್ನು ಮೇಲೆಳೆಯಲು ಯತ್ನಿಸಿದ್ದು ನೀರಿನ ಅಬ್ಬರ ಜಾಸ್ತಿಯಾಗಿದ್ದರಿಂದ ಸಾಧ್ಯವಾಗಿಲ್ಲ. ಸುಮಾರು 8 ಗಂಟೆ ವೇಳೆಗೆ ಬೋಟ್ ಪೂರ್ಣ ಮುಳುಗಡೆಗೊಂಡಿತು. ಅದರಲ್ಲಿದ್ದ ಮೀನುಗಾರರನ್ನು ಮೂಕಾಂಬಿಕಾ ಬೋಟಿನವರು ದಡಕ್ಕೆ ಸೇರಿಸಿದ್ದಾರೆ.
ಈ ದೋಣಿ ದುರಂತದಿಂದ ಅಂದಾಜು 18 ಲಕ್ಷ ರೂ. ನಷ್ಟಭವಿಸಿದೆ ಎಂದು ಅಂದಾಜಿಸಲಾಗಿದೆ.
Comments are closed.