ಬೆಂಗಳೂರು: ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ.

ಪತಿ ವಿಜಯ ರಾಘವೇಂದ್ರ ಅವರ ಜೊತೆಗೆ ಬ್ಯಾಂಕಾಕ್’ಗೆ ತೆರಳಿದ್ದಾಗ ಅಲ್ಲಿ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರನ್ನು ಪ್ರೀತಿಸಿ ವಿಜಯ ರಾಘವೇಂದ್ರ 2007 , ಆಗಸ್ಟ್ 26 ರಲ್ಲಿ ಮದುವೆಯಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ಕಹಿ ಘಟನೆ ನಡೆದಿದೆ.
ದಂಪತಿಗೆ ಇವರಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು.
Comments are closed.