ಬೆಂಗಳೂರು: ನಟ ಶಿವರಾಜ್ಕುಮಾರ್ ಅವರು ನಂದಿನಿ ಉತ್ಪನ್ನಗಳ ರಾಯಭಾರಿ ಆಗಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ತಿಳಿಸಿದ್ದಾರೆ.

ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹಾಗೂ ಎಂಡಿ ಜಗದೀಶ್ ಅವರು ನಟ ಶಿವರಾಜ್ಕುಮಾರ್ ಬಳಿ ಈ ಬಗ್ಗೆ ಮನವಿ ಮಾಡಿದ್ದರು. ಶಿವರಾಜ್ಕುಮಾರ್ ಅವರು ಈ ಮನವಿಗೆ ಸ್ಪಂದಿಸಿದ್ದಾರೆ. ನಂದಿನಿ ಉತ್ಪನ್ನಗಳ ಜಾಹೀರಾತಿನಲ್ಲಿ ಶಿವರಾಜ್ಕುಮಾರ್ ಅವರು ಕಾಣಿಸಿಕೊಳ್ಳಲಿದ್ದು ಶಿವಣ್ಣಗೆ ಹೂಗುಚ್ಛ ನೀಡಿ ಭೀಮಾನಾಯ್ಕ್ ಅಭಿನಂದಿಸಿದ್ದಾರೆ.
ಡಾ. ರಾಜ್ಕುಮಾರ್ ಅವರು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಭಾವನೆ ಪಡೆಯದೇ ಕೂಡ ನಂದಿನಿ ಉತ್ಪನ್ನದ ರಾಯಭಾರಿ ಆಗಿದ್ದರು. ಅವರು ಪ್ರಚಾರಕ್ಕೆ ಯಾವುದೇ ಸಂಭಾವನೆ ಪಡೆದಿರಲಿಲ್ಲ. ಬಳಿಕ ಪುನೀತ್ ರಾಜಕುಮಾರ್ ಕೂಡ ತಂದೆಯೇ ಹಾದಿಯಲ್ಲಿ ಸಾಗಿದ್ದರು. ಅವರು ಹಲವು ವರ್ಷಗಳ ಕಾಲ ನಂದಿನಿ ಪ್ರಾಡಕ್ಟ್ಗಳ ಪ್ರಚಾರದಲ್ಲಿ ಸಂಭಾವನೆ ಪಡೆಯದೇ ತೊಡಗಿಸಿಕೊಂಡಿದ್ದರು ಎಂಬ ಮಾಹಿತಿಯಿದೆ.
Comments are closed.