ಕರ್ನಾಟಕ

‘ಶೇ.40 ಭ್ರಷ್ಟಾಸುರ ಸರ್ಕಾರ’ ಸಂಹಾರ: ಕಾಂಗ್ರೆಸ್​ನಿಂದ ವಿನೂತನ ಪ್ರತಿಭಟನೆ

Pinterest LinkedIn Tumblr

ಮೈಸೂರು: ರಾಜ್ಯದ ಬಿಜೆಪಿ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದರು.

‘ಈ ಸರ್ಕಾರವು ರೈತ ಹಾಗೂ ಜನರ ವಿರೋಧಿಯಾಗಿದೆ. ಬೆಲೆ ಏರಿಕೆ ಹಾಗೂ ಅಸಮರ್ಥ ಸರ್ಕಾರ ಇದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ‘ಶೇ 40 ಭ್ರಷ್ಟಾಸುರ’ನನ್ನು ಸಂಹಾರ ಮಾಡಿದರು. ಪ್ರತಿಕೃತಿಯನ್ನು ಸುಡಲಾಯಿತು.

ಪಕ್ಷದ ರಾಜ್ಯ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ತಿ.ನರಸೀಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಎಚ್.ಸಿ. ಮಹಾದೇವಪ್ಪ, ಮುಖಂಡರಾದ ಬಿ.ಸೋಮಶೇಖರ್‌, ಸುನೀತಾ ವೀರಪ್ಪಗೌಡ ಪಾಲ್ಗೊಂಡಿದ್ದರು.

Comments are closed.