ಬೆಂಗಳೂರು: ಏರೋ ಇಂಡಿಯಾ ಆಯೋಜನೆಯು ದೇಶದ ಅಭಿವೃದ್ಧಿಯನ್ನು ಸೂಚಿಸುತ್ತಿದೆ. ಇಂದಿನ ಏರೋ ಇಂಡಿಯಾ ಕಾರ್ಯಕ್ರಮವನ್ನು ಇಡೀ ವಿಶ್ವ ಗಮನಿಸುತ್ತಿದೆ. 100 ರಾಷ್ಟ್ರಗಳು, 700ಕ್ಕೂ ಅಧಿಕ ಜನರು ಶೋನಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಿರುವ ಏರೋ ಇಂಡಿಯಾ 2023ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬಾರಿಯ ಏರ್ ಶೋ ಎಲ್ಲರೂ ಹೆಮ್ಮೆಪಡುವಂತಾಗಿದೆ. ಈ ಬಾರಿಯ ಏರ್ ಶೋ ಎಲ್ಲಾ ದಾಖಲೆಗಳನ್ನು ಮೆಟ್ಟಿ ನಿಂತಿದೆ. ಈ ಐದು ದಿನದ ಏರ್ ಶೋನಲ್ಲಿ ದೇಶ, ವಿದೇಶಿ ನಿರ್ಮಿತ ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ.
ಏರ್ ಶೋನಿಂದ ಕರ್ನಾಟಕದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕರ್ನಾಟಕದ ಯುವ ಜನತೆ ಹೊಸ ಹೊಸ ತಂತ್ರಜ್ಞಾನ ಸ್ವಾಗತಿಸುತ್ತಿದ್ದಾರೆ. ಕರ್ನಾಟಕ ತಂತ್ರಜ್ಞಾನದಲ್ಲಿ ಮುಂದಿದೆ ಎಂದು ಹೇಳಿದರು.
ಏರ್ ಶೋ ಮೂಲಕ ಹೊಸ ಹೊಸ ಉದ್ಯೋಗ ಸೃಷ್ಟಿಯಾಗಲಿವೆ. ಇದೊಂದು ಕೇವಲ ಕಾರ್ಯಕ್ರಮ ಆಗಿ ಉಳಿದಿಲ್ಲ. ಇದು ವಿಶ್ವದಲ್ಲಿ ಭಾರತದ ಶಕ್ತಿಯನ್ನು ಪ್ರದರ್ಶಿಸುತ್ತದೆ. ಏರ್ ಶೋ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇಂತಹ ಒಂದು ಅದ್ಭುತ ಕ್ಷಣಕ್ಕೆ ಬೆಂಗಳೂರು ಸಾಕ್ಷಿಯಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದರು.
Comments are closed.