ಕರಾವಳಿ

ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್‌ಗೆ ‘ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪುರಸ್ಕಾರ ‘

Pinterest LinkedIn Tumblr

ಮಂಗಳೂರು : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ , ಭಾರತ್ ಭವನ ತಿರುವನಂತಪುರ ಕೇರಳ ಸರ್ಕಾರ ಇದರ ಆಶ್ರಯದಲ್ಲಿ ನಡೆದ ‘ ಅನಂತಪುರಿ ಗಡಿನಾಡ ಸಾಂಸ್ಕೃತಿಕ ಉತ್ಸವ -2023’ ರ ಸಮಾರಂಭದಲ್ಲಿ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ‘ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪುರಸ್ಕಾರ ‘ ಸ್ವೀಕರಿಸಿದರು.

ತಿರುವನಂತಪುರದ ಭಾರತ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೇರಳ ಸರ್ಕಾರದ ಸಾರಿಗೆ , ಜಲಸಾರಿಗೆ ಸಚಿವರಾದ ಆಂಟನಿ ರಾಜು ಅವರು ಎಸ್.ಜಗದೀಶ್ಚಂದ್ರ ಅಂಚನ್ ರನ್ನು ಹಿರಿಯ ಕ್ರೀಡಾ ಅಂಕಣಕಾರ ನೆಲೆಯಲ್ಲಿ ಪುರಸ್ಕರಿಸಿದರು.

ಸುಮಾರು 30 ವರ್ಷಗಳಿಂದ ಕ್ರೀಡಾ ಲೇಖನಗಳ ಮೂಲಕ ಗುರುತಿಸಿಕೊಂಡಿರುವ ಜಗದೀಶ್ಚಂದ್ರ ಅಂಚನ್ ಇದುವರೆಗೆ ಸುಮಾರು 5000ಕ್ಕೂ ಹೆಚ್ಚು ಕ್ರೀಡಾ ಲೇಖನ/ಅಂಕಣ ಬರಹಗಳನ್ನು ಬರೆದಿದ್ದು , ಇದು ರಾಜ್ಯ , ಅಂತರ್ ರಾಜ್ಯ ಮಟ್ಟದ ವಿವಿಧ ದಿನ ಪತ್ರಿಕೆಗಳಲ್ಲಿ , ವಾರಪತ್ರಿಕೆಗಳಲ್ಲಿ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಅಲ್ಲದೆ ಹಲವಾರು ರಾಜ್ಯ , ಅಂತರ್ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿಗಳಿಂದ ಅಂಚನ್ ಪುರಸ್ಕತರರಾಗಿದ್ದಾರೆ.

ಸಮಾರಂಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಇದರ ಅಧ್ಯಕ್ಷರಾದ ಡಾ.ಸಿ. ಸೋಮಶೇಖರ್ , ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು , ಮಂಜೇಶ್ವರ ಶಾಸಕ ಎಂ.ಕೆ.ಎಂ.ಆಶ್ರಫ್ , ಉದುಮ ಕ್ಷೇತ್ರದ ಶಾಸಕ ಸಿ.ಹೆಚ್.ಕುಞಂಬು , ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಸಂಸ್ಥಾಪಕ ಪ್ರದೀಪ ಕುಮಾರ ಕಲ್ಕೂರ , ತಿರುವನಂತಪುರ ಜಿಲ್ಲಾ ಗ್ರಾಹಕ ತರ್ಕ ಪರಿಹಾರ ಆಯೋಗದ ಅಧ್ಯಕ್ಷ ನ್ಯಾ.ಪಿ.ವಿ.ಜಯರಾಜ್ , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ , ಕರ್ನಾಟಕ ಸಂಘದ ಅಧ್ಯಕ್ಷೆ ಭಾನುಮತಿ ಶೆಟ್ಟಿ , ಕೊಚ್ಚಿ ಕನ್ನಡ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ , ಸಿನಿಮಾ ನಟ ಮುಹಮ್ಮದ್ ಬಿನು , ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಎನ್ . ಚನಿಯಪ್ಪ ನಾಯ್ಕ್ , ಪತ್ರಕರ್ತರಾದ ಗಂಗಾಧರ ತೆಕ್ಕೇಮೂಲೆ , ರವಿ ನಾಯ್ಕಾಪು , ಅಖಿಲೇಶ್ ನಗುಮುಗಂ, ಮೊದಲಾದವರು ಉಪಸ್ಥಿತರಿದ್ದರು.

Comments are closed.