ಕರಾವಳಿ

ಉಡುಪಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ: ಇಬ್ಬರು ವಶಕ್ಕೆ, ಸಂತ್ರಸ್ತ ಮಹಿಳೆ ರಕ್ಷಣೆ

Pinterest LinkedIn Tumblr

ಉಡುಪಿ: ಉಡುಪಿ ಹಳೆ ಕೆ.ಎಸ್‌.ಆರ್‌.ಟಿ.ಸಿ. ಬಸ್ ನಿಲ್ದಾಣ ಸಮೀಪದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಕಾಪು ತೆಂಕ ಎರ್ಮಾಳ್ ನಿವಾಸಿ ಜಯಂತ್‌ ಸಾಲಿಯಾನ್‌ (46) ಹೆಬ್ರಿ ನಾಡ್ಪಾಲು ನಿವಾಸಿ ದಿನೇಶ್‌ ಎಸ್‌ (42) ಬಂಧಿತರು‌.

ಘಟನೆ ವಿವರ:
ಉಡುಪಿ ಹಳೆ ಕೆ.ಎಸ್‌.ಆರ್‌.ಟಿ.ಸಿ. ಬಸ್ ನಿಲ್ದಾಣದ ಸಮೀಪದ ವಸತಿಗೃಹದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ಲಾಡ್ಜ್ ಗೆ ದಾಳಿ ನಡೆಸಿದ್ದು ಸಂತ್ರಸ್ಥೆಯನ್ನು ರಕ್ಷಿಸಿ ಆರೋಪಿತಗಳಾದ ಜಯಂತ್ ಸಾಲಿಯಾನ್ ಮತ್ತು ದಿನೇಶ್ ಎಸ್ ಎನ್ನುವರನ್ನು ಬಂಧಿಸಿದ್ದು ಕೃತ್ಯಕ್ಕೆ ಸಂಬಂದಿಸಿದ 4 ಮೊಬೈಲ್ ಪೋನ್ , 5,600 ರೂ. ನಗದು, ಹಾಗೂ ಇತರೆ ಸಾಕ್ಷ್ಯ ವಶಕ್ಕೆ ಪಡೆದಿದ್ದಾರೆ.

ಪ್ರಕರಣದಲ್ಲಿ ಶೇಖರ್, ಜಯಂತ್ ಮತ್ತು ದಿನೇಶ್ ಎನ್ನುವ ಆರೋಪಿಗಳು ಸಂತ್ರಸ್ತ ಮಹಿಳೆಯನ್ನು ಲಾಡ್ಜ್ ರೂಮಿನಲ್ಲಿರಿಸಿ ಹಣಕ್ಕಾಗಿ ವೇಶ್ಯವಾಟಿಕೆ ನಡೆಸಿ ಈ ಹಣದಿಂದ ಜೀವನ ನಡೆಸುತ್ತಿರುವುದು ತನಿಖೆಯಲ್ಲಿ ತಿಳಿದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ‌.

Comments are closed.