ಕರಾವಳಿ

ಬಿಜೆಪಿ ಸಾವರ್ಕರ್ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದೆ: ಧ್ರುವನಾರಾಯಣ್

Pinterest LinkedIn Tumblr

ಕುಂದಾಪುರ: ಅಭಿವೃದ್ಧಿ ಕೆಲಸಗಳನ್ನು ಮಾಡದ ಬಿಜೆಪಿ, ಧರ್ಮ ರಾಜಕಾರಣಕ್ಕೆ ಮುಂದಾಗಿದೆ. ಸಾವರ್ಕರ್ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ಬಿಜೆಪಿ ಬಣ್ಣದ ಮಾತುಗಳಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ಪಾಠ ಕಲಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೇಳಿದರು.

ಕೊಲ್ಲೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಧರ್ಮದ ಆಧಾರದಲ್ಲಿ ಒಮ್ಮೆ ಮತವನ್ನು ಗಿಟ್ಟಿಸಿಕೊಳ್ಳಬಹುದು. ಬಣ್ಣ ಬಯಲಾದ‌ ಮೇಲೆ ಅದೇ ಅಜೆಂಡಾವನ್ನು ಇಟ್ಟುಕೊಂಡು ಮತ್ತೆ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ. ನಾವೆಲ್ಲರೂ ಹಿಂದೂಗಳು, ನಾವೂ ದೇವರನ್ನು ಪೂಜಿಸುತ್ತೇವೆ. ಧರ್ಮ, ಜಾತಿ ಮೇಲಿನ ರಾಜಕಾರಣ ಬಹಳ ಕಾಲ ಉಳಿಯೋದಿಲ್ಲ. ಶಾಶ್ವತವಾಗಿ ಉಳಿಯುವುದು ಅಭಿವೃದ್ದಿ ರಾಜಕಾರಣ ಒಂದೆ. ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರತಾಪಚಂದ್ರ ಶೆಟ್ಟಿ ನಮ್ಮ ಪಕ್ಷದ ಹಿರಿಯ ಮುಖಂಡರು. ಅವರು ಭಾರತ್ ಜೋಡೋ, ಸ್ವಾತಂತ್ರ ನಡೆಗೆ ಸೇರಿದಂತೆ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾಜಕೀಯದಲ್ಲಿ‌ ಅಪಾರವಾರ ಅನುಭವವುಳ್ಳ ಅವರ ಮಾರ್ಗದರ್ಶನದಲ್ಲಿಯೇ ಈ ಜಿಲ್ಲೆಯಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದರು.

Comments are closed.