ಕರ್ನಾಟಕ

ಪುನೀತ್ ರಾಜ್ ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ; ಮಳೆಯನ್ನೂ ಲೆಕ್ಕಿಸದೇ ಬಂದ ಅಪ್ಪು ಅಭಿಮಾನಿಗಳು!

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಪುನೀತ್​ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಿಗೆ ಸೂಪರ್​ ಸ್ಟಾರ್ ರಜನಿಕಾಂತ್,ಹಾಗೂ ನಟ ಜೂನಿಯರ್ ಎನ್​ಟಿಆರ್​, ಡಾ.ಸುಧಾಮೂರ್ತಿ ಸಹಿತ ಅನೇಕ ಗಣ್ಯರು ಆಗಮಿಸಿದ್ದರು.

ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಅಪ್ಪು ನಮ್ಮ ಜೊತೆ ಇದ್ದಾರೆ. ಆಕಾಶದಿಂದ ಮಳೆಯ ರೂಪದಲ್ಲಿ ಬಂದು ಅಪ್ಪು ನಮಗೆ ಶುಭಕೋರಿದ್ದಾರೆ. ಕರ್ನಾಟಕ ರತ್ನಕ್ಕೇ ಕರ್ನಾಟಕ ರತ್ನ ಕೊಡುವ ಭಾಗ್ಯ ಸಿಕ್ಕಿದೆ. ಇದೆ ನಮ್ಮ ಪುಣ್ಯ ಎಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮತ್ತೆ ಹುಟ್ಟಿ ಬಾ ಅಪ್ಪು, ಮತ್ತೆ ಹುಟ್ಟಿ ಬಾ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜ್ಯೋತ್ಸವದಂದು ಕರ್ನಾಟಕ ರತ್ನ ಪ್ರಶಸ್ತಿ ಕೊಡ್ತಿರೋದು ಇದೇ ಮೊದಲ ಬಾರಿಗೆ ಎಂದು ಬೊಮ್ಮಾಯಿ ಹೇಳಿದ್ರು. ಅತ್ಯಂತ ಕಿರಿಯ ವಯಸ್ಸಿನ ಅಪ್ಪುಗೆ ಕರ್ನಾಟಕ ರತ್ನ ಕೊಡ್ತಿರೋದು ಹೆಮ್ಮೆಯ ವಿಷಯ. ನಿಜವಾದ ರತ್ನನಿಗೆ ಕರ್ನಾಟಕ ರತ್ನ ಕೊಡ್ತಿದ್ದೇವೆ. ಅತ್ಯಂತ ಅಭಿಮಾನಿಗಳನ್ನು ಹೊಂದಿದ ರಾಜ್ ಕುಮಾರ್ ಅವರಿಗೆ ಹಿಂದೆ ಪ್ರಶಸ್ತಿ ಕೊಡಲಾಗಿತ್ತು. ಈಗ ಅವರ ಪುತ್ರ ಪುನೀತ್ ರಾಜ್​ ಕುಮಾರ್​ ಕೊಡಲಾಗ್ತಿದೆ. ಪುನೀತ್ ರಾಜ್​ ಕುಮಾರ್​ ಅವರು ಇನ್ನು ಇರಬೇಕಿತ್ತು ಅನ್ನೋ ನೋವು, ಸಂಕಟ ಇದೆ. ಎರಡು ಮನಸ್ಸಿನ ನಡುವೆ ಅವರಿಗೆ ಈ ಪ್ರಶಸ್ತಿ ಕೊಡ್ತಿದ್ದೇವೆ. ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾವುಕರಾದರು.

ಪುನೀತ್ ರಾಜ್​ಕುಮಾರ್ ಅವರಿಗೆ ಪ್ರಶಸ್ತಿ ನೀಡಿದ್ದು ಖುಷಿಯಾಗಿದೆ. ಅಪ್ಪು ಅವರಿಗೆ ಕರ್ನಾಟಕ ರತ್ನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಅಶ್ವಿನಿ ಪುನೀತ್​ ರಾಜ್​ ಕುಮಾರ್​ ಹೇಳಿದ್ದಾರೆ.

Comments are closed.